ರಾಯಚೂರು

ಗೆಜ್ಜಲಗಟ್ಟಾ ಗ್ರಾ.ಪಂ. ಪಿಡಿಓ ವರ್ಗಾವಣೆಗೆ ಆಗ್ರಹ

ಲಿಂಗಸುಗೂರು : ಉದ್ಯೋಗ ಖಾತ್ರಿ ಯೋಜನೆಯಡಿ ನಿಯಮಾನುಸಾರ ಸಭೆಗಳನ್ನು ಮಾಡದೇ, ಕೂಲಿ ಕೆಲಸ ನೀಡದೇ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ತಾಲೂಕಿನ ಗೆಜ್ಜಲಗಟ್ಟಾ ಗ್ರಾಮ ಪಂಚಾಯಿತಿ ಪಿಡಿಒ ಅಮರಗುಂಡಮ್ಮರನ್ನು ವರ್ಗಾವಣೆ ಮಾಡಬೇಕು ಎಂದು ಉದ್ಯೋಗ ಖಾತ್ರಿ ಕೂಲಿಕಾರರ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.


ತಾಲೂಕು ಪಂಚಾಯತ್‍ನ ಉದ್ಯೋಗ ಖಾತ್ರಿ ನೋಡಲ್ ಅಧಿಕಾರಿಗೆ ಮನವಿ ಸಲ್ಲಿಸಿದ ಅವರು, ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರ್ಮಿಕರ ಯಾವುದೇ ಗ್ರಾಮ ಸಭೆ ಮಾಡಿಲ್ಲ. ಈ ಬಗ್ಗೆ ಈಗಾಗಲೇ ತಾಲೂಕು ಪಂಚಾಯಿತಿ ಅಧಿಕಾರಿಗೆ ಮನವಿ ಸಲ್ಲಿಸಿದಾಗ್ಯೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಮೂರು ದಿನಕ್ಕೊಮ್ಮೆ ಪಂಚಾಯಿತಿಗೆ ಪಿಡಿಒ ಭೇಟಿ ನೀಡುತ್ತಾರೆ. ಪಿಡಿಒ ಅವರ ಸಹೋದರನ ಕೈಯಲ್ಲಿಯೇ ಎಲ್ಲಾ ವ್ಯವಹಾರಗಳು ನಡೆಯುತ್ತವೆ. ಉದ್ಯೋಗ ಖಾತ್ರಿ ಕೂಲಿಕಾರರಿಂದ ಹಣ ವಸೂಲು ಮಾಡುತ್ತಾರೆ. ಯಾವಾಗಲೂ ಪಿಡಿಒ ಬಿಜೆಪಿ ಮುಖಂಡರ ಮನೆಯಲ್ಲಿಯೇ ಕಾಣಸಿಗುತ್ತಾರೆ ಎಂದು ಅವರ ವಿರುದ್ಧ ಹಲವು ಆರೋಪ ಮಾಡಿರುವ ಪದಾಧಿಕಾರಿಗಳು ಕೂಡಲೇ ಪಿಡಿಒರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಬರುವ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ಹಮ್ಮಿಕೊಳ್ಳುವ ಎಚ್ಚರಿಕೆಯನ್ನೂ ಮನವಿಯಲ್ಲಿ ನೀಡಿದ್ದಾರೆ.


ಸಂಘಟನೆಯ ಪ್ರಧಾನ ಕಾರ್ಯದರ್ಶಿ ತಿಪ್ಪರಾಜ ಗೆಜ್ಜಲಗಟ್ಟಾ, ಕೆ.ಆದಪ್ಪ, ಹನುಮಂತ ಜಲ್ಲಿ, ರಹೀಮ್, ರಾಮಣ್ಣ, ಡಿಜಿ ಶಿವು, ರಮಪ್ಪ, ಪ್ರಭು, ಆಲಂಸಾಬ, ಖಾಸಿಂಸಾಬ, ಮೌಲಾಸಾಬ, ನಾಗಪ್ಪ, ಬಸವರಾಜ, ಮುರ್ತುಜಾ, ಹಾಜಿಬಾಬು, ಲಚಮಣ್ಣ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!