ಆದರ್ಶ ವಿಧ್ಯಾಲಯಕ್ಕೆ ನ್ಯಾಯಾಧೀಶರ ಭೇಟಿ : ಪರಿಶಿಲನೆ
ಲಿಂಗಸುಗೂರು : 6ನೇ ತರಗತಿಯಿಂದ ಶಾಲೆಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ಆದರ್ಶ ವಿಧ್ಯಾಲಯಕ್ಕೆ ಸಿವಿಲ್ ನ್ಯಾಯಾಧೀಶ ವಿನಾಯಕ ಮಾಯಣ್ಣ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಶಾಲಾವರಣದ ಸ್ವಚ್ಛತೆ, ಮಕ್ಕಳ ಆರೋಗ್ಯ, ಶಿಕ್ಷಕರ ಮಾರ್ಗದರ್ಶನ, ಸ್ಯಾನಿಟೈಜರ್, ಶೌಚಾಲಯ, ಕುಡಿಯುವ ನೀರು, ತಗರತಿ ಕೊಠಡಿ, ಆಸನಗಳ ವ್ಯವಸ್ಥೆ ಸೇರಿ ವಿದ್ಯಾರ್ಥಿಗಳಿಗೆ ಮೂಲ ಸವಲತ್ತುಗಳನ್ನು ಒದಗಿಸಲಾಗುತ್ತಿದೆಯೇ ಎನ್ನುವುದನ್ನು ಖಾತರಿಪಡಿಸಿಕೊಂಡ ನ್ಯಾಯಾಧೀಶರು, ಸರಕಾರ ನಿಯಮಾನುಸಾರ ಸಾಮಾಜಿಕ ಅಂತರ ಕಾಯ್ದುಕೊಂಡು ಮಕ್ಕಳಿಗೆ ಪಾಠ ಬೋಧನೆ ಮಾಡುವಂತೆ ಸೂಚನೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ್, ವಿಧ್ಯಾಲಯದ ಮುಖ್ಯಶಿಕ್ಷಕ ಸಾಬಣ್ಣ ವಗ್ಗರ್ ಸೇರಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಯ ಸಿಬ್ಬಂಧಿಗಳು ಈ ಸಂದರ್ಭದಲ್ಲಿ ಇದ್ದರು.

