ನರೇಗಾದಡಿ ಕಡಿಮೆ ಕೂಲಿ ಪಾವತಿ : ಕ್ರಮಕ್ಕೆ ಆಗ್ರಹಿಸಿ ತಾ.ಪಂ.ಗೆ ಮುತ್ತಿಗೆ
ಲಿಂಗಸುಗೂರು : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕಡಿಮೆ ಕೂಲಿಯನ್ನು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಐದನಾಳ ಗ್ರಾಮದ ಕೂಲಿಕಾರ್ಮಿಕರು ಆಗ್ರಹಿಸಿ. ತಾಲೂಕು ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
2021ರ ಫೆಬ್ರುವರಿ 10 ರಿಂದ 25ರ ವರೆಗೆ ಕೆರೆ ಹೂಳೆತ್ತುವ
ಕಾಮಗಾರಿಯನ್ನು ಮಾಡಲಾಗಿದೆ. ಸರಕಾರದ ಸುತ್ತೋಲೆಯ ಪ್ರಕಾರ ದಿನಕ್ಕೆ 275 ರೂಪಾಯಿ ಜೊತೆಗೆ 10 ಕೂಲಿ ನೀಡುವ ಆದೇಶವಿದೆ. ಆದರೆ,ಕಾಳಾಪೂರ ಪಂಚಾಯಿತಿ ಅಧಿಕಾರಿಗಳು ದಿನಕ್ಕೆ 160 ರೂಪಾಯಿ ಕೂಲಿ ಪಾವತಿ ಮಾಡಿ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ. 10 ವರ್ಷಗಳವರೆಗೆ ನಿರಂತವಾಗಿ ನರೇಗಾದಡಿ ದುಡಿಯುತ್ತಿರುವ ಕಾರ್ಮಿಕರಿಗೆ ನಿಯಮಾನುಸಾರ ಕೂಲಿ ಹಣ ನೀಡದೇ ಅನ್ಯಾಯ ಮಾಡಲಾಗಿದೆ. ಕೂಡಲೇ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿಯವರಿಗೆ ಒತ್ತಾಯಿಸಿದರು.

