ಬಯ್ಯಾಪೂರದಲ್ಲಿ ಅರಳಿದ ಕಮಲ
ಲಿಂಗಸುಗೂರು : ಕಾಂಗ್ರೆಸ್ ಪಕ್ಷದ ತವರು ಎಂದೇ ಕರೆಯಲ್ಪಡುವ ತಾಲೂಕಿನ ಬಯ್ಯಪೂರ ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಮಾಹಾಂತಗೌಡ ಪಾಟೀಲ್ ಜಯಗಳಿಸುವ ಮೂಲಕ ಮೊದಲ ಬಾರಿಗೆ ಬಯ್ಯಾಪುರ ಗ್ರಾಮದಲ್ಲಿ ಕಮಲ ಅರಳಿದಂತಾಗಿದೆ.
ಜಯಗಳಿಸಿದ ಬಳಿಕ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಹಾಗೂ ಬಿಜೆಪಿ ಹೈಕಮಾಂಡ್ ಮಾನಪ್ಪ ವಜ್ಜಲ್ ರ ಆಶೀರ್ವಾದ ಪಡೆದರು. ನೂತನ ಸದಸ್ಯ ಚಂದ್ರಶೇಖರ ಪಾಟೀಲರಿಗೆ ವಜ್ಜಲ್ ರು ಸನ್ಮಾನಿಸಿ ಗೌರವಿಸಿದರು.
ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.

