ಸ್ನೇಹಜೀವಿ ಚಾರ್ಲ್ಸ್ ಗೆ ಜೆಡಿಎಸ್ ಬಳಗದಿಂದ ಸನ್ಮಾನ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯ ಸ್ನೇಹಜೀವಿ ಎಂದೇ ಗುರುತಿಸಿಕೊಂಡಿರುವ ಸಿಟಿ ಸ್ಕ್ಯಾನ್ ವಿಭಾಗದ ಎಂ. ಚಾರ್ಲ್ಸ್ ಕುಮಾರ್ ಅವರನ್ನು ಜೆಡಿಎಸ್ ಬಳಗದಿಂದ ಸನ್ಮಾನಿಸಿ ಗೌರವಿಸಲಾಯಿತು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ, ಸಾಧ್ಯತಾ ಆರೋಗ್ಯ ಸೇವೆಯನ್ನು ಒದಗಿಸುವ ಕಾರ್ಯ ಮಾಡುವ ಇವರ ಸೇವೆಯನ್ನು ಗುರುತಿಸಿ ಮಾಧ್ಯಮಗಳು ಬೆಳಕು ಚೆಲ್ಲಿದ ಪ್ರಯುಕ್ತ ಸ್ನೇಹಜೀವಿ ಅವರ ಬಗ್ಗೆ ಇಲಾಖೆಯಲ್ಲೂ ಗೌರವ ಹೆಚ್ಚಿದೆ. ಇವರ ಕಾರ್ಯಸೇವೆ ಇತರರಿಗೂ ಮಾದರಿಯಾಗಲಿ ಎಂದು ಜೆಡಿಎಸ್ ಮುಖಂಡ ಸಿದ್ದು ಬಂಡಿ ಶುಭ ಹಾರೈಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಇಮ್ತಿಯಾಜ್ ಪಾಷಾ, ಯುವ ಮುಖಂಡರಾದ ಸಿದ್ದು ಬಡಿಗೇರ್, ನರೇಶ್ ರೆಡ್ಡಿ ಸೇರಿ ಇತರರು ಇದ್ದರು.

