ಸ್ವಂತ ಖರ್ಚಿನಲ್ಲಿ ಖಬರಸ್ತಾನ್ ಸ್ವಚ್ಛತೆಗೆ ಮುಂದಾದ ಯುವಕರ ತಂಡ
ಲಿಂಗಸುಗೂರು : ಸರಕಾರದ ಅನುದಾನ ಬಂದರೂ ಅದರಲ್ಲಿ ಅರ್ಧ ಗುಳುಂ ಮಾಡಿ, ಇನ್ನರ್ಧದಲ್ಲಿ ಕಳಪೆಯಾಗಿ ಕೆಲಸ ಮಾಡುವ ವ್ಯವಸ್ಥೆ ಇರುವಾಗ, ಮುಸ್ಲಿಂ ಸಮುದಾಯದ ಸಮಾನ ಮನಸ್ಕ ಯುವಕರ ತಂಡವು ಇದ್ಯಾವುದಕ್ಕೂ ನೆಚ್ಚಿಕೊಳ್ಳದೇ ತಮ್ಮದೇ ಸ್ವಂತ ಖರ್ಚಿನಲ್ಲಿ ಸ್ಥಳೀಯ ಖಬರಸ್ತಾನ್‍ಅನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಮಾದರಿಯ ಕಾರ್ಯವಾಗಿದೆ.
ಕಳೆದ ನಾಲ್ಕಾರು ದಿನಗಳಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಜೆಸಿಬಿಗಳನ್ನು ಬಳಸಿ ಕರಡಕಲ್ ರಸ್ತೆಯಲ್ಲಿರುವ ಖಬರಸ್ತಾನ್ ಜಾಗೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಮಾಜದ ಕೆಲ ಯುವ ಮುಖಂಡರು ಸೇರಿಕೊಂಡು ಖಬರಸ್ತಾನ್‍ದಲ್ಲಿ ಬೆಳೆದಿರುವ ಜಾಲಿ, ಕಸವನ್ನು ತೆಗೆಯುವ ಕೆಲಸಕ್ಕೆ ಮುಂದಾಗಿರುದು ಇತರರಿಗೆ ಮಾದರಿಯಾಗಿದೆ.
ಮುಫ್ತಿ ಯೂನೂಸ್‍ಖಾಸ್ಮಿ, ಇಮ್ತೆಯಾಜ್‍ಪಾಷಾ, ಅಮೀನ್ ಗ್ಯಾರಂಟಿ, ಇಬ್ರಾಹಿಂ, ರಿಯಾಜ್, ಜಾನಿ ಟೈಲರ್, ಇರ್ಷಾದ್, ನಾಸಿರ್, ಸಿರಾಜ್, ಮೊಹಮ್ಮದ್ ಕೆಎಫ್‍ಸಿ, ಹುಸೇನ್‍ಸಾಬ ಸೇರಿ ಇತರರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

