ಅತ್ಯಾಚಾರ, ಕೊಲೆ : ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
ಲಿಂಗಸುಗೂರು : ಚಿತ್ರದುರ್ಗ ಜಿಲ್ಲೆಯ ಇಸಮುದ್ರ ಗ್ರಾಮದಲ್ಲಿ
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಕೊಲೆಗೈದ ದುಷ್ಕರ್ಮಿಗಳನ್ನು ಬಂಧಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಮೃತ ಬಾಲಕಿಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ತಾಲೂಕು ಹಡಪದ ಅಪ್ಪಣ್ಣ ಯುವಕ ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.
ಸಹಾಯಕ ಆಯುಕ್ತ ರಾಹುಲ್ ಸಂಕನೂರು ಅವರ ಮೂಲಕ
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಜುಲೈ 23ರಂದು ಬಯಲು ಶೌಚಕ್ಕೆ ತೆರಳಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು ಆಕೆಯನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂಥಹ ಘಟನೆಯಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ, ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮೃತ ಬಾಲಕಿಯ ಕುಟುಂಬಕ್ಕೆ
ಸರಕಾರ ನ್ಯಾಯ ದೊರಕಿಸಿಕೊಡುವ ಜೊತೆಗೆ ಪರಿಹಾರವನ್ನೂ
ನೀಡಬೇಕು. ಈ ಪ್ರಕರಣದ ತನಿಖೆ ವಿಳಂಬವಾದಲ್ಲಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳುವುದಾಗಿ ಪ್ರತಿಭಟನಾಕಾರರು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಂಘದ ತಾಲೂಕು ಅದ್ಯಕ್ಷ ಶರಣಬಸವ ಈಚನಾಳ, ಪ್ರಧಾನ
ಕಾರ್ಯದರ್ಶಿ ಚುಡಾಮಣಿ ಚಿತ್ತಾಪೂರ, ಕಾರ್ಯಾದ್ಯಕ್ಷ ಮುತ್ತಣ್ಣ
ಗುಡಿಹಾಳ, ಉಪಾದ್ಯಕ್ಷ ವಿರೇಶ ಗುಂಡಸಾಗರ, ಖಜಾಂಚಿ ಚನ್ನಪ್ಪ
ಆನೆಹೊಸೂರು, ಮಲ್ಲಿಕಾರ್ಜುನ ಚಿತಾಪೂರ, ಮಹೇಶ ಪೂಲಭಾವಿ,ಸಂತೋಷ ಹೊಸೂರು, ವಿಶ್ವನಾಥ ದೋಟಿಹಾಳ, ಶರಣಬಸವ ಗುಡಿಹಾಳ,ರವಿ ಕಸಬಾಲಿಂಗಸೂರು, ಅಮರೇಶ, ಚಂದ್ರಶೇಖರ ಗುಡಿಹಾಳ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.
