ಶಂಕಿತ ಡೆಂಗ್ಯೂ ಪ್ರಕರಣ : ಗೋನವಾಟ್ಲಾ ತಾಂಡದಲ್ಲಿ ಆರೋಗ್ಯ ಸಿಬ್ಬಂಧಿ ಬೀಡು
ಲಿಂಗಸುಗೂರು : ತಾಲೂಕಿನ ಗೋನವಾಟ್ಲಾ ತಾಂಡದಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳು ಕಂಡು ಬಂದಿದ್ದು, ಆರೋಗ್ಯ ಇಲಾಖೆ ಸಿಬ್ಬಂಧಿಗಳು ತಾಂಡಾದಲ್ಲಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ.
ತಾಂಡಾದಲ್ಲಿನ ಕಲುಶಿತ ವಾತಾವರಣದಿಂದ ಜನರಿಗೆ ತೀವ್ರವಾಗಿ, ಜ್ವರ, ವಾಂತಿ, ಬೇಧಿಗಳಂಥಹ ಪ್ರಕರಣಗಳು ಕಂಡು ಬಂದಿವೆ. ಕಳೆದ 15 ದಿನಗಳಿಂದ ಗ್ರಾಮದಲ್ಲಿರುವ ಆರೋಗ್ಯ ಸಿಬ್ಬಂಧಿಗಳು ನಿಯಮಿತವಾಗಿ ಜನರನ್ನು ತಪಾಸಣೆ ಮಾಡುತ್ತಿದ್ದಾರೆ.
ಇದುವರೆಗೂ 410 ಜನರ ಮಲೇರಿಯಾ ವರದಿ ನೆಗೆಟಿವ್ ಬಂದಿದೆ, 23 ಜನರ ಡೆಂಗ್ಯೂ ವರದಿ ನೆಗೆಟಿವ್ ಬಂದಿದೆ. ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗದಿಂದ ಬಚಾವಾಗಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಅಮರೇಶ ಪಾಟೀಲ್‍ರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ತಂಡ ತಾಂಡಾದ ಮನೆಮನೆಗೂ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಲಾಗಿದೆ. ತಾಂಡಾದಲ್ಲಿ ಸ್ವಚ್ಛತೆ ಕಾಪಾಡುವಂತೆ ಫಾಗಿಂಗ್ ಮಾಡಲು ಸೂಚನೆ ನೀಡಲಾಗಿದೆ.
ಡಾ.ಸಂಗನಗೌಡ, ಪ್ರಾಣೇಶ್ ಜೋಶಿ, ಪ್ರತಾಪ್, ಸಿದ್ಧಲಿಂಗಯ್ಯ, ಸಿದ್ಧಲಿಂಗಪ್ಪ, ಅಲಿ, ಜಗದೀಶ, ಶಾರದಾ, ರಾಧಾ ಸೇರಿ ಆರೋಗ್ಯ ಇಲಾಖೆ ಸಿಬ್ಬಂಧಿಗಳು ತಪಾಸಣಾ ತಂಡದಲ್ಲಿದ್ದಾರೆ.

