ಸ್ನೇಹಜೀವಿ ಚಾರ್ಲ್ಸ್ ಗೆ ಆತ್ಮೀಯ ಸನ್ಮಾನ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಯ ಸ್ನೇಹಜೀವಿ ಎಂದೇ ಗುರುತಿಸಿಕೊಂಡಿರುವ ಸಿಟಿ ಸ್ಕ್ಯಾನ್ ವಿಭಾಗದ ಎಂ. ಚಾರ್ಲ್ಸ್ ಕುಮಾರ್ ಅವರನ್ನು ಆರೋಗ್ಯ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆಸ್ಪತ್ರೆಗೆ ಬರುವ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಜೊತೆಗೆ, ಸಾಧ್ಯತಾ ಆರೋಗ್ಯ ಸೇವೆಯನ್ನು ಒದಗಿಸುವ ಕಾರ್ಯ ಮಾಡುವ ಇವರ ಸೇವೆಯನ್ನು ಗುರುತಿಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಎಕ್ಸರೇ ವಿಭಾಗದ ರಮೇಶ್ ಸೇರಿ ಇತರರು ಇದ್ದರು.

