ಲಿಂಗಸುಗೂರು : ಸಿಡಿಲಿಗೆ ಬಣಿವೆ ಭಸ್ಮ
ಲಿಂಗಸುಗೂರು : ಶನಿವಾರ ಸಂಜೆ ಬಿದ್ದ ಸಿಡಿಲಿಗೆ ಪುರಸಭೆ ವ್ಯಾಪ್ತಿಯ ಕರಡಕಲ್ ಹೊರವಲಯದ ಜಮೀನೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಬಣಿವೆ ಸುಟ್ಟು ಭಸ್ಮವಾಗಿದೆ. ಸಿಡಿಲು ಬಿದ್ದ ಸುದ್ದಿ ತಿಳಿದು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿತ್ತಾದರೂ ಭಾಗಶಃ ಬಣಿವೆ ಬೆಂಕಿಗೆ ಆಹುತಿಯಾಗಿದೆ.
ಕರಡಕಲ್ ಗ್ರಾಮದ ನಿವಾಸಿ ರಮಣಪ್ಪ ಎನ್ನುವವರಿಗೆ ಸೇರಿದ ಬಣಿವೆ ಎನ್ನಲಾಗುತ್ತಿದ್ದು, ಅದೃಷ್ಟವಶಾತ್ ಸುತ್ತಮುತ್ತ ಜನ, ಜಾನುವಾರುಗಳು ಇಲ್ಲದ ಪರಿಣಾಮ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿಯಾಗಿದೆ.

