ರಾಯಚೂರು

ಎಚ್ಚೆತ್ತಕೊಳ್ಳದ ಜನತೆ : ತರಕಾರಿ ಮಾರುಕಟ್ಟೆಯಲ್ಲಿ ಜನವೋ ಜನ..!

ವರದಿ : ಖಾಜಾಹುಸೇನ್
ಲಿಂಗಸುಗೂರು : ಎರಡು ಕೈಗಳು ಸೇರಿದಾಗ ಮಾತ್ರ ಚಪ್ಪಾಳೆ ಆಗುತ್ತವೆ ಎನ್ನುವ ಮಾತಿನಂತೆ ಕೇವಲ ಅಧಿಕಾರಿಗಳೇ ಲಾಕ್‍ಡೌನ್‍ಗೆ ಮುಂದಾಗುತ್ತಿದ್ದಾರೆಯೇ ಹೊರತು ಸಾರ್ವಜನಿಕರು ಮಾತ್ರ ಈ ಬಗ್ಗೆ ಕೊಂಚಿತ್ತೂ ಕಾಳಜಿ ವಹಿಸದೇ ಗುಂಪಾಗಿ ತರಕಾರಿ ಕೊಳ್ಳಲು ಮಾರುಕಟ್ಟೆಯಲ್ಲಿ ಸೇರುವ ಮೂಲಕ ಮಹಾಮಾರಿ ಸೊಂಕಿನ ಬಗ್ಗೆ ಎಚ್ಚೆತ್ತುಕೊಳ್ಳದೇ ಇರುವುದು ದುರಂತವೇ ಸರಿ.


ತಾಲೂಕಿನಲ್ಲಿ ಪ್ರತಿದಿನವೂ ಸೊಂಕಿತರ ಪ್ರಕರಣಗಳು ಬಯಲಿಗೆ ಬರುತ್ತಲೇ ಇವೆ. ಕೆಲವರು ಮಾತ್ರ ಮನೆಗಳಲ್ಲಿದ್ದುಕೊಂಡು ಅಗತ್ಯವಿದ್ದರಷ್ಟೇ ಹೊರಗಡೆ ಬರುತ್ತಾರೆ. ಆದರೆ, ಬಹುತೇಕರು ಸುಖಾಸುಮ್ಮನೇ ಮಾರುಕಟ್ಟೆ ನೋಡಲಿಕ್ಕೆಂದೇ ಹೊರಗಡೆ ಬಂದು ಇತರರಿಗೆ ತೊಂದರೆ ಕೊಡುವ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಲಾಕ್‍ಡೌನ್‍ಗೆ ಜನರ ಸಹಕಾರ ನಿರೀಕ್ಷಿತ ಪ್ರಮಾಣದಲ್ಲಿ ಆಗದೇ ಇರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.


ಲಿಂಗಸುಗೂರು ತಾಲೂಕಿಗೆ ಶುಕ್ರವಾರ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದ ಜಿಲ್ಲಾಧಿಕಾರಿಗಳು ಭಾನುವಾರದಿಂದ ಬುಧವಾರದ ವರೆಗೆ ಸಂಪೂರ್ಣ ಲಾಕ್‍ಡೌನ್ ಘೋಷಿಸಿ ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆಗಳು, ಔಷಧ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಅಂಬುಲೆನ್ಸ್, ಅಗ್ನಿಶಾಮಕ ಸೇವೆ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳನ್ನು ಭಾನುವಾರ (ಮೇ-16) ಬೆಳಗ್ಗೆ 6 ಗಂಟೆಯಿಂದ ದಿಂದ ಬುಧವಾರ (ಮೇ-19) ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣವಾಗಿ ನಿಶೇಧಿಸಿ ಆದೇಶ ಹೊರಡಿಸಿದ್ದಾರೆ.


ಇನ್ನಾದರೂ ಜನ ಆಡಳಿತಕ್ಕೆ ಸಹಕಾರ ನೀಡುತ್ತಾರೋ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

error: Content is protected !!