ಶಾಸಕಿ ಮೇಲಿನ ಕೇಸ್ ವಾಪಸ್ಸಿಗೆ ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ
ಲಿಂಗಸುಗೂರು : ರೈತರ ನ್ಯಾಯಪರವಾದ ಹೋರಾಟದಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಜಯನಗರದ ಶಾಸಕಿ ಸೌಮ್ಯರೆಡ್ಡಿಯವರ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದ್ದು, ಕೂಡಲೇ ವಾಪಸ್ ಪಡೆದುಕೊಳ್ಳಬೇಕೆಂದು ಲಿಂಗಸುಗೂರು ಬ್ಲಾಕ್ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.
ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರ ಮೂಲಕ ಗೃಹಸಚಿವರಿಗೆ ಮನವಿ ಸಲ್ಲಿಸಿದ ಮುಖಂಡರು, ರೈತ ವಿರೋಧಿ ಕಾನೂನು ಹಿಂಪಡೆದುಕೊಳ್ಳಲು ಒತ್ತಾಯಿಸಿ ರಾಜಭವನ ಚಲೋ ಹೋರಾಟದಲ್ಲಿ ಪಾಲ್ಗೊಂಡಿದ್ದ ಶಾಸಕಿ ಸೌಮ್ಯರೆಡ್ಡಿಯವರ ಮೇಲೆ ಮಹಿಳಾ ಪೋಲಿಸ್‍ರು ಕೆಟ್ಟದಾಗಿ ವರ್ತನೆ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ತಳ್ಳಾಡಿದ್ದಾರೆ. ಈ ಬಗ್ಗೆ ಸಾಕ್ಷಿಗಳಿದ್ದರೂ ಪೋಲಿಸರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುವ ಬದಲು ಶಾಸಕಿಯ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಕೂಡಲೇ, ಶಾಸಕಿಯ ಮೇಲೆ ಹಾಕಿರುವ ಪ್ರಕರಣವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬ್ಲಾಕ್ ಕಾಂಗೆಸ್ ಅಧ್ಯಕ್ಷ ಭೂಪನಗೌಡ ಕರಡಕಲ್, ಮುಖಂಡರಾದ ಶರಣಪ್ಪ ಮೇಟಿ, ಪಾಮಯ್ಯ ಮುರಾರಿ, ಮಲ್ಲಿಕಾರ್ಜುನ ವಾರದ, ಸೋಮಶೇಖರ ಐದನಾಳ, ಗುಂಡಪ್ಪ ನಾಯಕ, ಬಾಬುರೆಡ್ಡಿ, ಯಮನಪ್ಪ ದೇಗಲಮಡಿ, ನಾಗರೆಡ್ಡಿ, ಪರಶುರಾಮ ನಗನೂರ, ನಾಡಗೌಡ ಹೆಸರೂರು, ಬಸಣ್ಣ ಮೇಟಿ, ಸಿದ್ದಪ್ಪ ಪರಂಗಿ, ಎಂ.ಜಿಲಾನಿ, ಸೇರಿ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

