ರಾಯಚೂರು

ಪತ್ರಿಕಾ ದಿನಾಚರಣೆ : ಒಂಬತ್ತು ಜನ ಪತ್ರಕರ್ತರಿಗೆ ಗೌರವ ಸನ್ಮಾನ

ಲಿಂಗಸುಗೂರು : ಸ್ಥಳೀಯ ಸಾಂಸ್ಕøತಿಕ ಭವನದಲ್ಲಿ ಮಂಗಳವಾರ ಅದ್ಧೂರಿಯಾಗಿ ಜರುಗಿದ ಮಟ್ಟದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಲಿಂಗಸುಗೂರು, ಹಟ್ಟಿ, ಮುದಗಲ್ ಸೇರಿ ತಾಲೂಕಿನ ಒಂಬತ್ತು ಜನ
ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಲಿಂಗಸುಗೂರು ಪಟ್ಟಣದ ಬಿ.ಎ.ನಂದಿಕೋಲಮಠ, ದುರುಗಪ್ಪ
ಹೊಸಮನಿ, ರಾಘವೇಂದ್ರ ಭಜಂತ್ರಿ, ಹಟ್ಟಿ ಪಟ್ಟಣದ ಕೆ.ಖಾಸಿಂಅಲಿ, ಸೋಮಣ್ಣ ಗುರಿಕಾ, ಸಿದ್ಧನಗೌಡ ಪಾಟೀಲ್, ಮುದಗಲ್ ಪಟ್ಟಣದ ಶರಣಯ್ಯ ಒಡೆಯರ್,ಹನುಮಂತ ನಾಯಕ, ಶಶಿಧರ ಕಂಚಿಮಠ ಇವರುಗಳ ಪತ್ರಿಕಾ ರಂಗದಲ್ಲಿನ ಸೇವೆಯನ್ನು ಪರಿಗಣಿಸಿ ಸಮಾರಂಭದಲ್ಲಿ ಶಾಸಕ ಡಿ.ಎಸ್.ಹೂಲಗೇರಿ, ಸಂಪಾದಕ ಮಲ್ಲಿಕಾರ್ಜುನ ಸಿದ್ಧಣ್ಣನವರ್ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.

ಸನ್ಮಾನದಿಂದ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದ್ದು, ಸನ್ಮಾನಿತಗೊಂಡ ಪತ್ರಕರ್ತರು ಹೆಚ್ಚಿನ ಜವಾಬ್ದಾರಿಯಿಂದ ಸಮಾಜಮುಖಿ ವರದಿಗಳನ್ನು ಭಿತ್ತರಿಸುವ ಮೂಲಕ ಇತರರಿಗೆ ಮಾದರಿಯಾಗಬೇಕೆಂದು ಸಂಪಾದಕರು ಈ ಸಂದರ್ಭದಲ್ಲಿ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!