ರಾಯಚೂರು

ಲಿಂಗಸುಗೂರು : ಜಂಗಮ ಸಮಾಜದ ಸಾಧಕರಿಗೆ ಸನ್ಮಾನ

ಲಿಂಗಸುಗೂರು : ಶಿಕ್ಷಣ, ಆರೋಗ್ಯ, ಸಾಮಾಜಿಕ, ರಾಜಕೀಯ, ಶಾಸ್ತ್ರೀಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜಂಗಮ ಸಮಾಜದ ಸಾಧಕರನ್ನು ಸ್ಥಳೀಯ ಈಶ್ವರ ದೇವಸ್ಥಾನದಲ್ಲಿ ವೀರಶೈವ ಜಂಗಮ್ಮ ಸಮಾಜದಿಂದ ಸನ್ಮಾನಿಸಲಾಯಿತು.
ರಾಜ್ಯ ಮತ್ತು ಕೇಂದ್ರ ಸರಕಾರಗಳ ಸವಲತ್ತುಗಳನ್ನು ಪಡೆಯಲು ಜಂಗಮ ಸಮುದಾಯ ಸಂಘಟನಾತ್ಮಕವಾಗಿ ಹೋರಾಡುವ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಪ್ರಭುಸ್ವಾಮಿ ಅತ್ತನೂರು ಕರೆ ನೀಡಿದರು.

ಇಂದು ಪ್ರತಿಯೊಂದು ರಂಗದಲ್ಲಿ ಪೈಪೋಟಿಯಿದ್ದು, ಅದರಲ್ಲೂ ಜಂಗಮ ಸಮುದಾಯ ಶೈಕ್ಷಣಿಕ, ಸಾಮಾಜಿಕ, ರಾಜಕೀಯ ರಂಗಳಲ್ಲಿ ಉನ್ನತ ಹುದ್ದೆ, ಸ್ಥಾನಮಾನ ಪಡೆಯುವುದು ಕಷ್ಟಸಾಧ್ಯ. ಇಂತಹ ಪೈಪೋಟಿಯ ಮಧ್ಯೆಯೂ ಸಮಾಜಮುಖಿ ಕಾರ್ಯ, ಪಕ್ಷನಿಷ್ಠೆಯಿಂದ ಸ್ಥಾನಮಾನ, ಗೌರವಕ್ಕೆ ಭಾಜನರಾಗಿ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಗುರುಸಂಗಯ್ಯ ಗಣಾಚಾರಿ, ಬಿಜೆಪಿ ಜಿಲ್ಲಾ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಅಮರೇಶ ಹಿರೇಮಠ ತೋರಣದಿನ್ನಿ, ಪುರಸಭೆ ನಾಮನಿರ್ದೇಶನ ಸದಸ್ಯ ಚನ್ನಬಸವ ಹಿರೇಮಠ, ಗೌರವ ಡಾಕ್ಟರೇಟ್ ಪಡೆದ ಗಂಗಾಧರಯ್ಯ ಶಾಸ್ತ್ರಿ, ಖಾಸಗಿ ಪಿಯು ಕಾಲೇಜುಗಳ ಒಕ್ಕೂಟದ ತಾಲೂಕು ಅಧ್ಯಕ್ಷ ವಿನಯಕುಮಾರ ಗಣಾಚಾರಿ ಅವರನ್ನು ಸಮಾರಮಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.


ಸಮಾಜದ ಪ್ರಧಾನ ಕಾರ್ಯದರ್ಶಿ ವೀರಭದ್ರಯ್ಯ ಯಲಗಲದಿನ್ನಿ, ಖಜಾಂಚಿ ಶರಣಯ್ಯ ದಾಸೋಹಮಠ, ಮುಖಂಡರಾದ ಬಸವರಾಜ ಹಿರೇಮಠ ಕಿರಾಣಿ, ನಾಗಯ್ಯ ಸೊಪ್ಪಿಮಠ, ಮಹೇಶ ನಂದಿಕೋಲಮಠ, ಜಗದೀಶ ಸಾಲಿಮಠ, ಗುಂಡಯ್ಯ ಸೊಪ್ಪಿಮಠ, ಪಂಪಯ್ಯಸ್ವಾಮಿ, ಈಶ್ವರಯ್ಯ, ಅಮರೇಶ ಬಲ್ಲಟಗಿ, ಗಂಗಾಧರಯ್ಯ, ಸಂತೋಷ ಸೊಪ್ಪಿಮಠ, ಚಂದ್ರಶೇಖರಯ್ಯ, ಅಮರೇಶ ಹಿರೇಮಠ, ವೀರಭದ್ರಯ್ಯ ಗುಂತಗೋಳ, ಮಲ್ಲಿಕಾರ್ಜುನಯ್ಯ, ಅಮರೇಶ ಹಿರೇಮಠ, ನಾಗರಾಜ, ರವಿಕುಮಾರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!