ಸಮಾಜಸೇವಕನಿಗೆ ಗ್ರಾ.ಪಂ. ಸಿಬ್ಬಂಧಿಯಿಂದ ಜೀವಬೆದರಿಕೆ : ಠಾಣೆಗೆ ದೂರು
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮ ಪಂಚಾಯತ್‍ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದ ಪರಿಣಾಮ ಗ್ರಾಮದ ಶರಣಪ್ಪ ಎನ್ನುವ ಸಮಾಜ ಸೇವಕನಿಗೆ ಪಂಚಾಯಿತಿ ಸಿಬ್ಬಂಧಿ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ.
ಗ್ರಾಮ ಪಂಚಾಯತ್‍ನಲ್ಲಿ ಭ್ರಷ್ಟಾಚಾರದಲ್ಲಿ ಪಂಚಾಯತ್ ಸಿಬ್ಬಂಧಿಗಳು ಭಾಗಿಯಾಗಿದ್ದಾರೆ. ಉದ್ಯೋಗ ಖಾತ್ರಿ ಯೋಜನೆಯ ಹಾಜರಾತಿಯಲ್ಲಿ ಏರುಪೇರು ಆಗಿರುವ ಬಗ್ಗೆ ಧ್ವನಿ ಎತ್ತಿದ್ದಕ್ಕೆ ದೂರವಾಣಿ ಕರೆ ಮಾಡಿದ ಪಂಚಾಯಿತಿ ಸಿಬ್ಬಂಧಿ ಬಿಎಫ್‍ಟಿಓ ವಯಕ್ತಿಕ ದ್ವೇಷ ಸಾಧಿಸುತ್ತಾ, ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಶರಣಪ್ಪ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸಂಬಂಧಿಸಿದ ವ್ಯಕ್ತಿಯನ್ನು ಠಾಣೆಗೆ ಕರೆಸಿ ಪಿಎಸ್‍ಐ ಪ್ರಕಾಶರೆಡ್ಡಿ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆನ್ನುವ ಮಾಹಿತಿ ಇದೆ.

