ರಾಯಚೂರು

ನದಾಫ್/ಪಿಂಜಾರ್ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಒತ್ತಾಯ

ಲಿಂಗಸುಗೂರು : ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಬಡ ಸಮುದಾಯಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ನದಾಫ್/ಪಿಂಜಾರ್ ಅಭಿವೃದ್ಧಿ ನಿಗಮ
ಮಂಡಳಿಯನ್ನು ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ನದಾಫ್ಪಿಂ ಜಾರ್ ಸಂಘದ ರಾಜ್ಯಾಧ್ಯಕ್ಷರ ಜಲೀಲಸಾಬರ ನೇತೃತ್ವದಲ್ಲಿ ತೆರಳಿದ ನಿಯೋಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಒತ್ತಾಯಿಸಿದರು.


ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ತೆರಳಿದ
ನಿಯೋಗವು, ಬಜೆಟ್ ನಲ್ಲಿ ಪ್ರತ್ಯೇಕ ನದಾಫ್/ಪಿಂಜಾರ ಅಭಿವೃದ್ಧಿ ನಿಗಮ ಮಂಡಳಿ ಘೋಷಿಸಬೇಕು. ಕರ್ನಾಟಕ ರಾಜ್ಯದಲ್ಲಿ ವಾಸಿಸುವ ನದಾಫ್/ಪಿಂಜಾರ ಸಮಾಜ ಸುಮಾರು 25 ರಿಂದ 30 ಲಕ್ಷಗಳ ಜನಸಂಖ್ಯೆ ಹೊಂದಿದ್ದು, ಈ ಜನಾಂಗ ಶೈಕ್ಷಣಿಕಾವಾಗಿ, ಆರ್ಥಿಕವಾಗಿ,ಔದ್ಯೋಗಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದ ಜನಾಂಗವಾಗಿದೆ. ಈ ಜನಾಂಗ ಶೇಕಡ 90 ಕ್ಕೂ ಅಧಿಕ
ಬಡತನ ರೇಖೆಯಲ್ಲಿದ್ದು ಮಕ್ಕಳಿಗೆ ಶಿಕ್ಷಣ ಕೊಡಿಸುವ ಆರ್ಥಿಕ ಶಕ್ತಿ ಇಲ್ಲದೆ ಇಂದಿನ ಸ್ಪರ್ಧಾತ್ಮಕ ಜನ ಜೀವನದ ಹೋರಾಟದಲ್ಲಿ ಹಾಗೂ ಇನ್ನಿತರ ಎಲ್ಲಾ ಹಂತದಲ್ಲಿ ದುರ್ಬಲವಾಗಿದೆ. ಮತ್ತು ರಾಜಕೀಯವಾಗಿ ಕೂಡಾ ಯಾವದೇ ಪ್ರಬುದ್ಧತೆ ಇಲ್ಲದೇ ಶೋಷಿತ ಹಾಗೂ ಬಹಳ ಕಷ್ಟಕರ ಜೀವನವನ್ನು ನಡೆಸುತ್ತಿರುವ ಜನಾಂಗವಾಗಿದೆ. ಮತ್ತು ಸರಳತೆಯಲ್ಲಿ ಎಲ್ಲಾ ವರ್ಗದ ಜನತೆಯೊಂದಿಗೆ ಅರಿತು-ಬೆರೆತು ಜೀವನ ನೆಡೆಸುತ್ತಿರುವ ಕೋಮು
ಸೌಹಾರ್ಧತೆಯ ಸಂಕೇತವಾದ ಜನಾಂಗವಾಗಿದೆ. ಈ ಜನಾಂಗ ನಗರ ಹಾಗೂ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಅಲೆಮಾರಿಯಾಗಿ ಅಲೆಯುತ್ತಾ ಜನಾಂಗದ ಮೂಲ ವೃತ್ತಿಯಾದ ಗಾದಿ, ಹಗ್ಗ ಕಂಣ್ಣಿ ತಯ್ಯಾರಿಕೆ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ತಾಂತ್ರಿಕತೆಯಿಂದ ಈ ಜನಾಂಗದ ತಯ್ಯಾರಿಕೆ ವಸ್ತುಗಳಿಗೆ ಬೇಡಿಕೆ ಇಲ್ಲದಂತಾಗಿ ಕಸಬು ಸಂಪೂರ್ಣ ನಿಲುಗಡೆ ಯಾಗಿದೆ. ಹೀಗಾಗಿ ದುಡಿಮೆಗಾಗಿ ಗೌಂಡಿ, ಕೂಲಿ ಕೆಲಸ, ಬೀದಿಗಳಲ್ಲಿ ಹಂಣು
ತರಕಾರಿ ವ್ಯಾಪಾರ, ಆಟೊಗ್ಯಾರೆಜ ನಂಥಹ ಸಂಣಪುಟ್ಟ ಉದ್ಯೋಗ ಮಾಡುತ್ತಿದ್ದು ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದೆ. ಈ ಜನಾಂಗವನ್ನು ಕೇಂದ್ರ ಸರಕಾರ ಗುರುತಿಸಿ ಓಬಿ ಸಿ ಪಟ್ಟಿಯಲ್ಲಿ ಪಟ್ಟಿಯಲ್ಲಿ ಸೇರ್ಪಡೆ
ಮಾಡಿದೆ. ಮತ್ತು ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದಿರುವ ಕಾಯ್ದೆಯಲ್ಲಿಯು ಸಹ ಕರ್ನಾಟಕ ರಾಜ್ಯದಲ್ಲಿರುವ ಈ ಜನಾಂಗವನ್ನು ಅತ್ಯಂತ ಹಿಂದುಳಿದಿರುವ ಬಗ್ಗೆ ಗುರುತಿಸಲಾಗಿದೆ. ಕರ್ನಾಟಕ
ಸರಕಾರದ ಮೀಸಲಾತಿ ಪ್ರಕಾರ ಹಿಂದುಳಿದ ಪ್ರವರ್ಗ-1 ರಲ್ಲಿಬರುವದರಿಂದ ಈಗಿರುವ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಹಲವಾರು ತಾಂತ್ರಿಕ ದೋಷಗಳಿಂದ, ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಇದುವರೆವಿಗೂ ಈ ಜನಾಂಗದಲ್ಲಿ ಒಬ್ಬ ಐಎಎಸ್ ಅಧಿಕಾರಿ ಯಾಗಲಿ, ಐಪಿಎಸ್ಅಧಿಕಾರಿಯಾಗಲಿ ಅಥವಾ ಕೆಪಿಎಸ್‍ಸಿ ಮೂಲಕ ನೇರ ಎಸಿ ಕೂಡಾ ಆಗಿರುವದಿಲ್ಲ. ಈ
ಜನಾಂಗ ಎಷ್ಟು ಹಿಂದುಳಿದಿದ್ದಾರೆ ಎನ್ನುವದಕ್ಕೆ ಇದು ಸಾಕ್ಷಿಯಾಗಿದೆ. ಈ ಹಿಂದೆ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಮಾನ್ಯ ಡಾ|| ಸಿ.ಎಸ್. ದ್ವಾರಕಾನಾಥ ಹಾಗೂ ಅವರ ತಂಡದವರ
ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಮೂಲಕ ಸಮಾಜದ ಎಲ್ಲಾ ಹಂತಗಳ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ಮಾಡಿ, ಈ ಜನಾಂಗಕ್ಕೆ ಸರಕಾರದಿಂದ ಯಾವ ಯಾವ ರೀತಿ ಸೌಲಭ್ಯಗಳನ್ನು ನೀಡಬಹುದೆಂಬ ಬಗ್ಗೆ ಆಯೋಗವು
2010 ರಲ್ಲಿ ಸ್ಪಷ್ಟವಾದ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಈ ಸಮಾಜಕ್ಕೆ ಮೂಲಭೂತವಾದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರಕಾರ ಈ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಬೇಕೆಂದು
ಹತ್ತಾರು ವರ್ಷಗಳಿಂದ ಮನವಿ ಮಾಡುತ್ತ ಬಂದಿದೆ. ಆದರೆ ಹಿಂದಿನ ಸರಕಾರಗಳು ಈ ಜನಾಂಗವನ್ನು ನಿರ್ಲಕ್ಷಿಸುತ್ತಾ ಯಾವದೇ ಸೌಲಭ್ಯಗಳನ್ನು ನೀಡಿರುವದಿಲ್ಲ.

ಈಗಾಗಲೇ ಈ ಜನಾಂಗ ರಾಜ್ಯ ಘಟಕದ ನಿಯೋಗದೊಂದಿಗೆ ಸನ್ಮಾನ್ಯ ಮುಖ್ಯ ಮಂತ್ರಿಗಳವರಿಗೆ ದಿ. 21-09-2019 ಹಾಗೂ 24-10-2019 ರಂದು ನೇರವಾಗಿ 2 ಸಾರೆ ಭೇಟಿಮಾಡಿ, ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿದರೆ
ಮಾತ್ರ ಈ ಜನಾಂಗದ ಅಭಿವೃದ್ಧಿ ಸಾಧ್ಯ ಎಂದು ಮನವಿ ನೀಡಿದೆ. ಮತ್ತು ಈ 2 ಬೇಡಿಕೆಗಾಗಿ ಸರಕಾರದ ಮನ ಒಲಿಸಲು ದಿನಾಂಕ 01-12-2020 ರಂದು ರಾಜ್ಯಾದ್ಯಂತ ಎಲ್ಲಾ ತಾಲೂಕಗಳಿಂದ ಮಾನ್ಯ ತಹಸೀಲ್ದಾರರವರ
ಮೂಲಕ ಹಾಗೂ ರಾಜ್ಯಾದ್ಯಂತ ದಿನಾಂಕ 01-01-2021 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಿಂದ ಮಾನ್ಯ ಜಿಲ್ಲಾಧಿಕಾರಿಗಳವರ ಮೂಲಕ ಏಕ ಕಾಲಕ್ಕೆ
ಒತ್ತಾಯಿಸಿ ಮನವಿ ನೀಡಲಾಗಿದೆ. ಅದೇ ರೀತಿ ದಿನಾಂಕ 20-01-2021 ರಂದು ರಾಜ್ಯಾದ್ಯಂತ ಏಕ ಕಾಲಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಒಂದು ದಿನದ ಸಾಂಕೇತಿಕ ಧರಣಿಯನ್ನು ಸಹ ಮಾಡಲಾಗಿದೆ.

ಈ ಸರಕಾರ ಕೂಡಾ ಇದುವರೆವಿಗೂ ಈ ಜನಾಂಗದ ಬೇಡಿಕೆಗಳ ಬಗ್ಗೆ ಯಾವದೇ ರೀತಿಯಲ್ಲಿ
ಸ್ಪಂಧಿಸಿರುವದಿಲ್ಲ. ಇಂದು ಕೂಡಾ ರಾಜ್ಯ ಘಟಕದ ನಿಯೋಗದೊಂದಿಗೆ 3 ನೇ ಬಾರಿ ಈ ಜನಾಂಗದ ಬೇಡಿಕೆಗೆ ಬೇಗನೆ ಸ್ಪಂದಿಸಿ ನಿಗಮ ರಚಿಸುವ ಕುರಿತು 2021-
22 ರ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಸರಕಾರವನ್ನು ಒತ್ತಾಯಿಸಲು.ನೇರವಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳನ್ನು ಭೇಟಿ ಮಾಡಲಾಯಿತು.ನಿಗಮ ಮಂಡಳಿ ರಚನೆ ಕುರಿತಂತೆ ಇಂದಿನ ರಾಜಕೀಯ ವಾಸ್ತವ ಪರಿಸ್ಥಿತಿಗೆ
ಅನುಗುಣವಾಗಿ ಪ್ರಾಥಮಿಕ ಹಂತದಲ್ಲಿ ಯಾವದೇ ರೀತಿಯಲ್ಲಿ ಪರ್ಯಾಯವಾಗುವಂಥಹ ಸೌಲಭ್ಯಗಳನ್ನು ಪಡೆದು ಕೊಳ್ಳುವಂತಾಗ ಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಅನೇಕ ಸಂಸದರು, ಸಚಿವರು ಹಾಗೂ ಶಾಸಕರು ಕೂಡ ಉಪಸ್ತಿತರಿದ್ದು, ಅಭಿವೃದ್ಧಿ ನಿಗಮ ಮಂಡಳಿ ಅಥವಾ ಈ ಸಮಾಜದ ಬೇಡಿಕೆಗೆ ಪೂರಕವಾಗುವಂತೆ ಯಾವದೇ ರೀತಿಯ ಸೌಲಭ್ಯಗಳನ್ನು
ನೀಡುವದು ಬಹಳ ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತ
ಪಡಿಸಿದರು. ಸನ್ಮಾನ್ಯ ಮುಖ್ಯ ಮಂತ್ರಿಗಳು ಈ ಸಮಾಜದ ಬೇಡಿಕೆಯ ಬಗ್ಗೆ ಸುಧೀರ್ಘವಾದ ಚರ್ಚೆಯನ್ನು ಹಾಗೂ ವಿವರಗಳನ್ನು ಪಡೆದುಕೊಂಡು ಸಕಾರಾತ್ಮಕವಾಗಿ ಸ್ಪಂದಿಸುವದಾಗಿ ಭರವಸೆಯನ್ನು ನೀಡಿರುತ್ತಾರೆ. ಒಂದುವೇಳೆ ಸರಕಾರ ಬೇಡಿಕೆಗಳಿಗೆ ಸ್ಪಂಧಿಸದೇ ಇದ್ದಲ್ಲಿ
ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಹೋರಾಟ ಮಾಡಲಾಗುವದು ಎಂದು ನಿಯೋಗದಲ್ಲಿ ಉಪಸ್ಥಿತರಿದ್ದ ಎಲ್ಲ ಸದಸ್ಯರು ಗಮನ ಸೆಳೆದಿದ್ದಾರೆ.

ಈ ನಿಯೋಗದಲ್ಲಿ ರಾಜ್ಯ ಉಪಾಧ್ಯಕ್ಷರಾದ ಜಿ.ಡಿ. ನದಾಫ್, ರಾಜ್ಯ ಸಲಹಾ ಸಮಿತಿ ಅಧ್ಯಕ್ಷರಾದ ಹೆಚ್.ದಾದಾ ಖಲಂದರ್, ರಾಜ್ಯ ಪ್ರಧಾನ ಕಾರ್ಯದರ್ಶಿ,ರಾಜ್ಯ ಖಜಾಂಚಿ, ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಎಲ್ಲಾ ವಿಭಾಗೀಯ
ಉಪಾಧ್ಯಕ್ಷರುಗಳು, ರಾಜ್ಯದ ಜಿಲ್ಲಾ ಹಾಗೂ ತಾಲೂಕ
ಅಧ್ಯಕ್ಷರುಗಳು, ಸಮಾಜದ ಹಿತೈಷಿಗಳು ಹಾಗೂ ಗಣ್ಯರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!