ರಾಯಚೂರು

ವಿದ್ಯುತ್ ವಿತರಣಾ ಕೇಂದ್ರ ಮಂಜೂರು ಮಾಡಲು ರೈತರ ಒತ್ತಾಯ

ಲಿಂಗಸುಗೂರು : ತಾಲೂಕಿನ ಆಮದಿಹಾಳ ಗ್ರಾಮ ವ್ಯಾಪ್ತಿಯಲ್ಲಿ ಸರಕಾರದ ಸ್ವಾಧೀನದಲ್ಲಿರುವ ಸರ್ವೆ ನಂಬರ್ 72/1ರಲ್ಲಿ 04 ಎಕರೆ ಜಮೀನನ್ನು 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಮಂಜೂರು ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ
ಹಸಿರು ಸೇನೆ ಕಾರ್ಯಕರ್ತರು ಒತ್ತಾಯಿಸಿದರು.

ಸಹಾಯಕ ಆಯುಕ್ತ ರಾಜಶೇಖರ ಡಂಬಳ್‍ರಿಗೆ ಮನವಿ ಸಲ್ಲಿಸಿದ ಅವರು, ತಾಲೂಕಿನ ಆಮದಿಹಾಳ ಗ್ರಾಮದ ಸುತ್ತಮುತ್ತಲಿರುವ ಚಿಕ್ಕಲೆಕ್ಕಿಹಾಳ, ಹಿರೇಲೆಕ್ಕಿಹಾಳ, ಕನಸಾವಿ, ಕೋಮಲಾಪುರ,ಬೆಳ್ಳಿಹಾಲ, ಆದಾಪುರ ಸೇರಿ ಇತರೆ ಗ್ರಾಮಳ ವಿದ್ಯುತ್ ಸಮಸ್ಯೆಗಳನ್ನು ನೀಗಿಸಲು ಜೆಸ್ಕಾಂ ಇಲಾಖೆಯು 110/11 ಕೆ.ವಿ.ವಿದ್ಯುತ್ ಉಪ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದ್ದು, ಈ ಉಪಕೇಂದ್ರ ಸ್ಥಾಪಿಸಲು 4 ಎಕರೆ ಜಮೀನು ಅವಶ್ಯಕತೆ ಇರುವುದರಿಂದ ಆಮದಿಹಾಳ ಗ್ರಾಮದಲ್ಲಿ ಸರಕಾರಕ್ಕೆ ಸಂಬಂಧಿಸಿದ ಜಮೀನು ಇದ್ದು, ಅದರಲ್ಲಿ ವಿತರಣಾ ಕೇಂದ್ರವನ್ನು ಆರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ರಾಜ್ಯ ಉಪಾದ್ಯಕ್ಷ ಅಮರಣ್ಣ ಗುಡಿಹಾಳ, ತಾಲೂಕು ಅದ್ಯಕ್ಷ ವೀರನಗೌಡ ಹಟ್ಟಿ, ದುರುಗೇಶ ಸುಲ್ತಾನಪುರ,ಭಾಗನಗೌಡ ಹಟ್ಟಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!