ಅಡುಗೆ ಮಾಡಿ, ಪ್ಯಾಕ್ ಮಾಡಿ, ಆಸ್ಪತ್ರೆಗೆ ತೆರಳಿ ಊಟ ವಿತರಿಸಿದ ಬಂಡಿ..!
ಲಿಂಗಸುಗೂರು : ಕೇವಲ ಅಭಿಮಾನಿಗಳು, ಕಾರ್ಯಕರ್ತರನ್ನೇ ಊಟ ವಿತರಣೆಗೆ ಹಚ್ಚದೇ ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಜೆಡಿಎಸ್ ಮುಖಂಡ ಸಿದ್ದು ಬಂಡಿಯವರು ಖುದ್ದು ಅಡುಗೆ ಮಾಡಿ, ಮಾಡಿದ ಅಡುಗೆಯನ್ನು ಪ್ಯಾಕ್ ಮಾಡಿ ಆಸ್ಪತ್ರೆಗಳಿಗೆ ತೆರಳಿ ಆಹಾರ ಪೊಟ್ಟಣಗಳನ್ನು ಅಗತ್ಯ ಇರುವವರಿಗೆ ವಿತರಣೆ ಮಾಡುವ ಮೂಲಕ ಇತರೆ ರಾಜಕಾರಣಿಗಳಿಗೆ ಮಾದರಿಯಾಗುವಂಥಹ ಕೆಲಸ ಮಾಡುತ್ತಿದ್ದಾರೆ.

ಕಳೆದ 13 ದಿನಗಳಿಂದ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಉಪಹಾರ-ಊಟದ ಪೊಟ್ಟಣಗಳನ್ನು ವಿತರಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಶುಕ್ರವಾರದಂದು ಸಿದ್ದು ಬಂಡಿಯವರೇ ಖುದ್ದಾಗಿ ಬಂದು ವ್ಯವಸ್ಥೆಗಳನ್ನು ಪರಿಶೀಲನೆ ಮಾಡುವ ಜೊತೆಗೆ ಸರಕಾರಿ ಆಸ್ಪತ್ರೆ ಸೇರಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಿದರು.

ತಾಲೂಕಿನ ಜೆಡಿಎಸ್ ಹೈಕಮಾಂಡ್ ಎಂದೇ ಗುರುತಿಸಿಕೊಂಡಿರುವ ಸಿದ್ದು ಬಂಡಿಯವರು ಇತರೆ ಪಕ್ಷಗಳ ಹೈಕಮಾಂಡ್‍ನಂತೆ ಕಾರ್ಯಕರ್ತರಿಗೆ ಊಟ-ಉಪಹಾರದ ಪ್ಯಾಕೇಟ್‍ಗಳನ್ನು ಹಂಚಲು ಬಿಟ್ಟಂತೆ ಬಿಡದೇ, ನೇರವಾಗಿ ತಾವೇ ಅಡುಗೆ ಮನೆಗೆ ತೆರಳಿ ಊಟ ತಯಾರಿಸಿದ್ದಲ್ಲದೇ ಫಲಾನುಭವಿಗಳಿಗೆ ವಿತರಣೆ ಮಾಡುವಲ್ಲೂ ಉತ್ಸಾಹದಿಂದ ಪಾಲ್ಗೊಂಡರು. ಇವರ ಈ ಕಾರ್ಯ ಇತರರಿಗೂ ಅನುಕರಣೀಯವಾಗಿದೆ. ಬಂಡಿಯವರು ಖುದ್ದಾಗಿ ಆಹಾರ ವಿತರಣೆಗೆ ಮುಂದಾಗಿರುವುದು ಫಲಾನುಭಗಳಲ್ಲಿ ಧನ್ಯತಾ ಭಾವ ಮೂಡಿಸುವ ಜೊತೆಗೆ ಅಭಿನಂದನೆಗಳೂ ಸಲ್ಲಿಕೆಯಾಗಿವೆ.

ಜೆಡಿಎಸ್ ಅದ್ಯಕ್ಷ ನಾಗಭೂಷಣ, ಮುಖಂಡರಾದ ಸಿದ್ದು ಬಡಿಗೇರ್, ಪರಶುರಾಮ ಕೆಂಭಾವಿ, ನರೇಶರೆಡ್ಡಿ ಮುನ್ನೂರು, ಕುಪ್ಪಣ್ಣ ಕಸಬಾಲಿಂಗಸುಗೂರು, ಸಹದೇವಪ್ಪ, ಜಗದೇವ ಹಿರೇಮಠ, ವಿರೇಶ ಮಾಟೂರು ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

