ರಾಯಚೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಲಿಂಗಸುಗೂರು : ಎಐಟಿಯುಸಿ ಸಂಯೋಜಿತ ಅಂಗನವಾಡಿ
ಕಾರ್ಯಕರ್ತೆಯರು ಮತ್ತು ಸಹಾಯಕಿಯರ
ಬೇಡಿಕೆಗಳನ್ನು ಈಡೇರಿಸದ 2021-22ರ ಬಜೆಟ್ ವಿರೋಧಿಸಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ
ಫೆಡರೇಷನ್ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ತಹಸೀಲ್ದಾರ್ ಚಾಮರಾಜ ಪಾಟೀಲ್‍ರ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಮನವಿ ಸಲ್ಲಿಸಿದ ಅವರು, ಸೇವಾ ಹಿರಿತನದ ಆಧಾರದಲ್ಲಿ ಗೌರವಧನ ಹೆಚ್ಚಳ ಮಾಡಲಾಗುವುದು. ದೀರ್ಘ ಸೇವೆ ಸಲ್ಲಿಸಿದವರೆಗೆ
ಗೋವಾ ರಾಜ್ಯ ಮಾದರಿಯನ್ನು ಜಾರಿ ಮಾಡಲಾಗುವುದು.

ತಪ್ಪಿದಲ್ಲಿ ಎಲ್ಲರಿಗೂ ಒಪ್ಪುವಂತಹ ಪ್ರತಿ ವರ್ಷ ಸೇವೆಗೆ ಇಂತಿಷ್ಟು ಮೊತ್ತವೆಂದು ನಿಗದಿಪಡಿಸಿದರೆ ಅವರವರ ಸೇವಾವಧಿಗೆ ಅನುಗುಣವಾಗಿ ಸೌಲಭ್ಯ ಸಿಗಲಿದೆ. ಆದ್ದರಿಂದ ದೀರ್ಘ ಸೇವೆ ಸಲ್ಲಿಸಿದವರಿಗೆ ನ್ಯಾಯ ಸಿಗಲಿದೆ. 2015ರ ನಂತರ ನಿವೃತ್ತಿಯಾದ 7294 ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಇಡಿಗಂಟು ನೀಡುವುದು ಹಾಗೂ ನಿವೃತ್ತ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಕನಿಷ್ಠ ರೂಪಾಯಿ 5 ಸಾವಿರಗಳ ಮಾಸಿಕ ಪಿಂಚಣಿ ಸೌಲಭ್ಯ ನೀಡಬೇಕು. ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸುವ ಇ.ಎಸ್.ಐ.
ಯೋಜನೆ ಸೌಲಭ್ಯ ಜಾರಿ ಮಾಡಬೇಕು.

ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ/ಯು.ಕೆ.ಜಿಯನ್ನು ಆರಂಭಿಸಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ, ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ
ಗೌರವಧನದ ಅಂತರವನ್ನು ಕಡಿಮೆ ಮಾಡಬೇಕು.

ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು
ನೇಮಕ ಮಾಡುವವರೆಗೂ ಮಿನಿ ಅಂಗನವಾಡಿ
ಕಾರ್ಯಕರ್ತೆಯರು ಆಹಾರ ತಯಾರಿಸುವುದಿಲ್ಲ ಎಂದು
ಪ್ರತಿಭಟನಾಕಾರರು ಎಚ್ಚರಿಕೆ ನೀಡುವ ಜೊತೆಗೆ, ಸರಕಾರ
ಇನ್ನಾದರೂ ನಮ್ಮ ಬೇಡಿಕೆಗಳನ್ನು ಪ್ರಸಕ್ತ ಅಧಿವೇಶನದಲ್ಲಿ
ಈಡೇರಿಸಬೇಕೆಂದು ಒತ್ತಾಯಿಸಿದರು.

ಫೆಡರೇಷನ್ ಗೌರವಾದ್ಯಕ್ಷೆ ವಿಜಯಲಕ್ಷ್ಮಿ ಮುದಗಲ್,
ಅದ್ಯಕ್ಷೆ ಮಹಾದೇವಿ, ಉಪಾದ್ಯಕ್ಷೆಯರಾದ ಗೌರಮ್ಮ ಗೋನ್ವಾರ,ನಾಗರತ್ನ, ಪ್ರಧಾನ ಕಾರ್ಯದರ್ಶಿ ಸಂಗಯ್ಯಸ್ವಾಮಿ ಚಿಂಚರಕಿ,ಸುವರ್ಣ ಗೆಜ್ಜಲಗಟ್ಟಾ, ಮರಿಯಂಬಿ, ಶಾವಮ್ಮ, ರೇಣುಕಾ ಸರ್ಜಾಪೂರ, ನೀಲಮ್ಮ, ಸಾವಿತ್ರಿ, ಉಮಾ,ಅನ್ನಪೂರ್ಣ,ಶಿವಗಂಗಮ್ಮ,ಸುಲೋಚನಾ, ಅನುಸೂಯ, ಲಾಳಮ್ಮ, ಶೋಭಾ, ಗಿರಿಜಾ ಸೇರಿ
ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!