ವಿಶ್ವ ಗ್ರಾಹಕರ ಹಕ್ಕುಗಳ ದಿನ : ಕಾನೂನು ಅರಿವು-ನೆರವು ಕಾರ್ಯಕ್ರಮ
ಲಿಂಗಸುಗೂರು : ಸ್ಥಳೀಯ ಎಸ್.ಎಂ.ಎಲ್.ಬಿ. ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನದ ನಿಮಿತ್ಯ ವಿದ್ಯಾರ್ಥಿಗಳಿಗಾಗಿ ಉಚಿತ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಜೆಎಂಎಫ್‍ಸಿ ಸಿವಿಲ್ ನ್ಯಾಯಾಧೀಶ ಸಂದೀಪ್ ಪಾಟೀಲ್
ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯವಾದಿಗಳ ಸಂಘದ ಅದ್ಯಕ್ಷ ಜಂಬಣ್ಣ ಮಂಚಾಲಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮಂಜುನಾಥ ಪಾನಘಂಟಿ, ಎಪಿಪಿ ವಸಂತ ಪಾಟೀಲ್, ಲೆಕ್ಕಪರಿಶೋಧಕ ಸಿಸಿ ಕರಡಕಲ್, ಕಾಲೇಜು ಪ್ರಾಚಾರ್ಯ ವಿರೇಶ ಪವ್ಹಾರ್, ಸಂಯೋಜಕ ಸುಧಾಕರ ನಾಗಠಾಣ ಸೇರಿ ಇತರರು
ಕಾರ್ಯಕ್ರಮದಲ್ಲಿ ಇದ್ದರು.

