ರಾಯಚೂರು

ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ದೇಣಿಗೆ ನೀಡಿದ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್

ಲಿಂಗಸುಗೂರು : ರಾಮ ಜನ್ಮ ಭೂಮಿ ಟ್ರಸ್ಟ್ ದೇಶಾದ್ಯಂತ ಹಮ್ಮಿಕೊಂಡಿರುವ ರಾಮ ಮಂದಿರ ನಿರ್ಮಾಣದ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಲಿಂಗಸುಗೂರು ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನದಲ್ಲಿ ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷ ಮಾನಪ್ಪ ವಜ್ಜಲ್ ರವರು ವಯಕ್ತಿಕವಾಗಿ 5 ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣ ಪ್ರತಿಯೊಬ್ಬ ಭಾರತಿಯರ ಕನಸಾಗಿತ್ತು. ಅದನ್ನು ಇಂದು ಕೇಂದ್ರ ಸರಕಾರ ನನಸಾಗಿಸಿದೆ.
ಮಂದಿರ ನಿರ್ಮಾಣದ ಕಾರ್ಯದಲ್ಲಿ ಪ್ರತಿಯೊಬ್ಬರೂ ಸೇವೆ ಸಲ್ಲಿಸಲ್ಲು ಸಿದ್ದರಾಗಿರೊಣ. ಅದು ಅಳಿಲು ಸೇವೆಯಾಗಿದರೂ ಸರಿ, ಹನುಮಂತನ ಸೇವೆಯಾಗಿದರು ಸರಿ ಸೇವೆ ಎಂಬುವುದು ಅತ್ಯಂತ ಶ್ರೇಷ್ಠವಾದದು ಎಂದರು.

ಯರಡೊಣಿಯ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು, ಶಾಂಭವಿ ಪೀಠಾಧ್ಯಕ್ಷರು ಸಾನಿಧ್ಯ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯವಾಹಕ ಪಾಂಡುರಂಗ ಆಪ್ಟೆ, ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್, ಪುರಸಭೆ ಸದಸ್ಯ ಮುದುಕಪ್ಪ ನಾಯಕ, ಮುಖಂಡರಾದ ಗಿರಿಮಲ್ಲನಗೌಡ ಮಾಲಿ ಪಾಟೀಲ್, ಡಾ. ಶಿವಬಸಪ್ಪ, ವೆಂಕನಗೌಡ ಪಾಟೀಲ್, ಅಯ್ಯಪ್ಪ ವಕೀಲರು, ಅಬ್ದುಲ್ ಬೇಕರಿ, ಚನ್ನಬಸವ ಹಿರೇಮಠ, ರಮೇಶ್ ಕಟ್ಟಿಮನಿ, ಅನಂತ ದಾಸ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!