ಲಿಂಗಸುಗೂರು ಆಸ್ಪತ್ರೆಗೆ ಬಂತು ಕೋವಿಡ್ ಲಸಿಕೆ..!ಶನಿವಾರದಿಂದ ನೋಂದಾಯಿತ 100 ಜನರಿಗೆ ಮೊದಲ ಹಂತದ ಲಸಿಕೆ
ವರದಿ : ಖಾಜಾಹುಸೇನ್
ಲಿಂಗಸುಗೂರು : ಕಳೆದ 10 ತಿಂಗಳಿಂದ ವಿಶ್ವವನ್ನು ಬಾಧಿಸುತ್ತಿದ್ದ ಕರೋನ ಮಹಾಮಾರಿಯ ಮದ್ದು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಬಂದಿದೆ. ಜನವರಿ 16ರಿಂದ ಲಸಿಕೆ ಕಾರ್ಯಕ್ರಮ ಆರಂಭವಾಗಲಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸೇರಿ ನೋಂದಾಯಿತ 100 ಜನರಿಗೆ ಮೊದಲನೇ ಸುತ್ತಿನ ಲಸಿಕೆ ನೀಡಲಾಗುವುದು.
ಕೋವಿಡ್ ಸೋಂಕು ಕೊಲ್ಲುವ ಕೋವಿಶೀಲ್ಡ್ ಲಸಿಕೆಯನ್ನು ಹೊತ್ತು ತಂದ ವಾಹನವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆರತಿ ಬೆಳಗಿ ಸ್ವಾಗತಿಸಿದರು. ಶನಿವಾರ ಪ್ರಧಾನ ಮಂತ್ರಿಗಳಿಂದ ಆನ್ಲೈನ್ ಮೂಲಕ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲೆಡೆ ಏಕಕಾಲಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ಜರುಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ಲಸಿಕೆ ಹಾಕಲು ಸಂಪೂರ್ಣ ಸುರಕ್ಷಿತ ಪೂರ್ವ ಸಿದ್ಧತೆಗಳನ್ನು ಮಾದಿಕೊಳ್ಳಲಾಗಿದೆ.
ಸರಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಲಕ್ಷ್ಮಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ್ ಪಾಟೀಲ್ ಸೇರಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

