ಕುಡಿವ ನೀರು, ಕಸ ವಿಲೇವಾರಿ : ಕ್ರಮಕ್ಕೆ ವಾರ್ಡ್ ನಿವಾಸಿಗಳ ಒತ್ತಾಯ
ಲಿಂಗಸುಗೂರು : ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಕುಡಿವ ನೀರಿನ ಸಮಸ್ಯೆ, ಕಸ ವಿಲೇವಾರಿ ಮಾಡದೇ ಇರುವುದನ್ನು ಖಂಡಿಸಿ ಲಿಂಗಸುಗೂರು ನಾಗರಿಕ ಸಮಿತಿ ಮುಖ್ಯಾಧಿಕಾರಿ ನರಸಪ್ಪ ತಶೀಲ್ದಾರ್‍ರಿಗೆ ಮನವಿ ಸಲ್ಲಿಸಿತು.
ಬಹುತೇಕ ಎಲ್ಲಾ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಚರಂಡಿಗಳು ತುಂಬಿ ಹರಿಯುತ್ತಿದ್ದು, ವಾತಾವರಣವೆಲ್ಲಾ ಗಬ್ಬೆದ್ದು ನಾರುತ್ತಿದೆ. ಕೆಲವೆಡೆ ಖಾಲಿ ನಿವೇಶನಗಳಲ್ಲಿ ಜಾಲಿಮುಳ್ಳುಗಳು ಬೆಳೆದು ಸೊಳ್ಳೆಗಳ ಕಾಟ ಮಿತಿಮೀರಿದೆ. ಕೂಡಲೇ ಕ್ರಮಕ್ಕೆ ಮುಂದಾಗುವ ಮೂಲಕ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕೆಂದು ಒತ್ತಾಯಿಸಿದರು.
ಸಮಿತಿ ಮುಖಂಡರಾದ ಡಾ.ಸುಭಾಸ್ ಪಲ್ಲೇದ್, ಪ್ರಭು ಗಸ್ತಿ, ವಿಶ್ವನಾಥ ಅನ್ವರಿ, ವಿರೇಶ ಜಗವತಿ, ರುಸ್ತುಂಖಾನ್, ಸೂರ್ಯಚಂದ್ರ, ಸಿಸಿ ಕರಡಕಲ್, ಮಹಾಂತೇಶ ಸುಂಕದ್, ಮಂಜುನಾಥ ಕಾಮಿನ್, ಚನ್ನವೀರಯ್ಯ, ಉಮೇಶ ಸರ್ಜಾಪೂರ, ರಾಜೇಶ ನಾಯಕ, ರಾಜಶೇಖರ ಪಾಟೀಲ್, ವಿಜಯ ಮೇಟಿ ಸೇರಿ ಇತರರು ಇದ್ದರು.

