ಸೊಂಕಿತ ಗರ್ಭಿಣಿಯ ಸುರಕ್ಷಿತ ಹೆರಿಗೆ : ಆರೋಗ್ಯವಾಗಿರುವ ತಾಯಿ-ಮಗು..!
ಲಿಂಗಸುಗೂರು : ಕೋವಿಡ್ ಸೊಂಕಿತೆ ಎನ್ನಲಾಗಿದ್ದ ತಾಲೂಕಿನ ಆನೆಹೊಸೂರು ಗ್ರಾಮದ ಗರ್ಭಿಣಿಯೋರ್ವಳ ಸುರಕ್ಷಿತ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯದಿಂದ ಇದ್ದಾರೆ.
ಮೇ 21ಕ್ಕೆ ಗರ್ಭಿಣಿಗೆ ಟೆಸ್ಟ್ ಮಾಡಿದಾಗ ಸೊಂಕು ದೃಢಪಟ್ಟಿದೆ. ಕಳೆದ ರಾತ್ರಿ ಸೊಂಕಿತೆ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ತುಂಬು ಗರ್ಭಿಣಿಯಾಗಿದ್ದ ಶೈನಾಜ್‍ಬೇಗಂ ಗಂಡ ಬಂದೇನವಾಜ್‍ರಿಗೆ ಆಸ್ಪತ್ರೆ ವೈದ್ಯರು ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಣ್ಣುಮಗುವಿಗೆ ಜನನ ನೀಡಿರುವ ತಾಯಿ ಮತ್ತು ಹಸುಗೂಸು ಆರೋಗ್ಯವಾಗಿದ್ದಾರೆ. ಮಗುವಿಗೆ ಹಾಲುಣಿಸಲು ಯಾವುದೇ ತೊಂದರೆ ಇಲ್ಲ. ಸಧ್ಯಕ್ಕೆ ಐಸೊಲೇಷನ್ ವಾರ್ಡ್‍ನಲ್ಲಿರುವ ಬಾಣಂತಿಯನ್ನು ಮೇ 28ಕ್ಕೆ ಡಿಸ್ಚಾರ್ಜ್ ಮಾಡಲಾಗುತ್ತದೆಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ.
ಡಾ.ಸಾಕ್ಷಿ ಬಯ್ಯಾಪೂರ, ಡಾ.ದಿಗಂಬರ್, ಸಿಸ್ಟರ್ ಅಂಜಲಿ ಸೇರಿ ಸಿಬ್ಬಂಧಿಗಳು ಇದ್ದರು.

