ಎರಡನೇ ದಿನಕ್ಕೆ ಸಾರಿಗೆ ನೌಕರರ ಮುಷ್ಕರ : ಪರದಾಟ
ಲಿಂಗಸುಗೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರದಿಂದ ಏಕಾಏಕಿ ಆರಂಭಗೊಂಡಿರುವ ಸಾರಿಗೆ ಇಲಾಖೆ ನೌಕರರ ಮುಷ್ಕರ ಶರನಿವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಸ್‍ಗಳು ಬಂದಾದ ಪರಿಣಾಮ ಪ್ರಯಾಣಿಕರು ಪರದಾಡುವಂಥಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಲ್ಲಿ ನಿತ್ಯ ನೂರಾರು ಬಸ್‍ಗಳ ಓಡಾಟ, ಸಾವಿರಾರು ಪ್ರಯಾಣಿಕರ ಓಡಾಟ ಇರುತ್ತಿತ್ತು. ಆದರೆ, ಮುಷ್ಕರದಿಂದ ನಿಲ್ದಾಣದಲ್ಲಿ ಬಸ್‍ಗಳು-ಪ್ರಯಾಣಿಕರು ಇಲ್ಲದೇ ಬಿಕೋ ಎನ್ನುವಂಥಹ ಪರಿಸ್ಥಿತಿ ಇತ್ತು. ಅಟೋ, ಟಂಟಂ, ಟೆಂಪೋ ಸೇರಿ ಖಾಸಗಿ ವಾಹನಗಳಲ್ಲೇ ಜನರು ಓಡಾಡುತ್ತಿದ್ದಾರೆ. ಆದರೆ, ಪರಿಸ್ಥಿತಿಯ ಲಾಭ ಪಡೆದುಕೊಂಡ ಕೆಲ ಖಾಸಗಿ ವಾಹಗಳು ದುಪ್ಪಟ್ಟು ದರಗಳನ್ನು ಸುಲಿಗೆ ಮಾಡುತ್ತಿದ್ದಾರೆನ್ನುವ ಆರೋಪಗಳು ಕೇಳಿ ಬರುತ್ತಿವೆ.
ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾರಿಗೆ ಡಿಪೋದಲ್ಲೇ ಬಸ್‍ಗಳನ್ನು ನಿಲ್ಲಿಸಿ ಚಾಲಕರು-ನಿರ್ವಾಹಕರು ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನನ್ನಾಗಿ ಪರಿಗಣಿಸಬೇಕು. ವೇತನ ಮತ್ತು ಭತ್ಯೆಯನ್ನು ಹೆಚ್ಚಳ ಮಾಡಬೇಕು. 8 ತಾಸು ಅಂತಾ ಕೆಲಸಕ್ಕೆ ನೇಮಿಸಿಕೊಂಡು 16 ತಾಸು ಕೆಲಸ ಮಾಡಿಸಿಕೊಳ್ಳುತ್ತಿದ್ದು ಅದಕ್ಕೆ ಭತ್ಯೆ ಕೊಡುತ್ತಿಲ್ಲ, ಕೂಡಲೇ ಕ್ರಮಕ್ಕೆ ಮುಂದಾಗಬೇಕು. ಕಳೆದ 8 ವಷರ್Àಗಳಿಂದ ಸಮವಸ್ತ್ರ ಕೊಡುತ್ತಿಲ್ಲ ಇದರಿಂದ ನೌಕರರ ಜೇಬಿಗೆ ಕತ್ತರಿ ಬೀಳುತ್ತಿದೆ. ಕೂಡಲೇ ಸಮವಸ್ತ್ರದ ವ್ಯವಸ್ಥೆ ಮಾಡಬೇಕು. ಸಾರಿಗೆ ಇಲಾಖೆಯ ಮೇಲಧಿಕಾರಿಗಳ ಕಿರುಕುಳ ತಪ್ಪಿಸಬೇಕು ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ನಡೆಸಿದರು.

