ರಾಯಚೂರು

ಹಟ್ಟಿ ಚಿನ್ನದಗಣಿ ಅದ್ಯಕ್ಷರ ಅಭಿನಂದನಾ ಸಮಾರಂಭ-ಗ್ರಾಮ ಸ್ವರಾಜ್ಯ ಸಮಾವೇಶ ಕೇಸರೀಮಯವಾದ ಲಿಂಗಸುಗೂರು ಪಟ್ಟಣ..!

ವರದಿ:ಖಾಜಾಹುಸೇನ್
ಲಿಂಗಸುಗೂರು : ತಾಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿಗೆ ನೂತನವಾಗಿ ಅದ್ಯಕ್ಷರಾಗಿರುವ ಮಾನಪ್ಪ ವಜ್ಜಲ್‍ರಿಗೆ ಅಭಿನಂದನಾ ಸಮಾರಂಭ ಹಾಗೂ ಗ್ರಾಮ ಸ್ವರಾಜ್ಯ ಸಮಾವೇಶದ ನಿಮಿತ್ಯ ಪಟ್ಟಣವನ್ನು ವಧುವಿನಂತೆ ಸಿಂಗರಿಸಲಾಗಿದೆ. ಎಲ್ಲಡೆ ಬ್ಯಾನರ್-ಬಂಟಿಂಗ್‍ಗಳನ್ನು ಕಟ್ಟುವ ಮೂಲಕ ಪಟ್ಟಣದ ಕೆಲ ಪ್ರದೇಶಗಳು ಕೇಸರಿಮಯವಾಗಿವೆ.
ಬಸ್ಟಾಂಡ್ ವೃತ್ತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ ಕಟೀಲ್, ರಾಜ್ಯ ಪ್ರದಾನ ಕಾರ್ಯದರ್ಶಿ ರವಿಕುಮಾರ ಸೇರಿ ಗಣ್ಯರು, ಹಾಗೂ ಬಿಜೆಪಿ ಪಕ್ಷದ ಹಿರಿಯರು ಸಮಾರಂಭಕ್ಕೆ ಆಗಮಿಸಲಿದ್ದಾರೆ.


ವಿಧಾನಸಭೆ ಚುನಾವಣೆ ಬಳಿಕ ಕಳೆದ ಎರಡು ವರ್ಷಗಳಿಂದ ಕ್ಷೇತ್ರದಲ್ಲಿ ಸದ್ದಿಲ್ಲದೇ ಬಿಜೆಪಿ ಪಕ್ಷ ತನ್ನದೇ ಆದ ಪಟಾಲಯಂನಿಂದ ಸಂಘಟನೆ ನಡೆಸುತ್ತಿದೆ. ಸಾವಿರಾರು ಕಾರ್ಯಕರ್ತರನ್ನು ಒತ್ತಟ್ಟಿಗೆ ಸೇರಿಸುವ ಜೊತೆಗೆ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಈ ಸಮಾರಂಭದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾದಂತೆ ಭಾಸವಾಗುತ್ತಿದೆ.
ಚಿನ್ನದ ಗಣಿಯ ನೂತನ ಅದ್ಯಕ್ಷ ಮಾನಪ್ಪ ವಜ್ಜಲ್‍ರು ಎರಡು ಅವಧಿಗೆ ಶಾಸಕರಾಗಿದ್ದಾಗ ಕ್ಷೇತ್ರಕ್ಕೆ ಸಲ್ಲಸಿದ್ದ ಸೇವೆಯ ಫಲವಾಗಿ ಜನ ಮತ್ತೊಮ್ಮೆ ಮಾನಪ್ಪರ ಬೆಂಬಲಕ್ಕೆ ನಿಂತಂತೆ ಕಾಣುತ್ತಿದೆ. ಸ್ಥಳೀಯ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ಜರುಗಲಿರುವ ಸಮಾರಂಭದ ಮೂಲಕ ಲಿಂಗಸುಗೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತೊಮ್ಮೆ ಫಿನಿಕ್ಸ್‍ನಂತೆ ಎದ್ದು ಬರಲು ಅಣಿಯಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.


ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮದೇ ಸರಕಾರ ಇರುವ ಪ್ರಯುಕ್ತ ಇದರ ಲಾಭ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಮಾಜಿ ಶಾಸಕರೂ ಶ್ರಮಿಸುವ ನಿಟ್ಟಿನಲ್ಲಿ ಮುಂದಾಗಿರುವುದು ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಭರವಸೆಗಳನ್ನು ಇಮ್ಮಡಿಗೊಳಿಸಿದೆ.

Leave a Reply

Your email address will not be published. Required fields are marked *

error: Content is protected !!