ರೈತ, ಕಾರ್ಮಿಕರ ವಿರೋಧಿ ಕಾಯ್ದೆ : ಪ್ರಚಾರ ಜಾಥಾ
ಲಿಂಗಸುಗೂರು : ಕೇಂದ್ರ ಸರಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಖಾಸಗೀಕರಣ, ಬೆಲೆ ಏರಿಕೆ ವಿರುದ್ಧ ಹಮ್ಮಿಕೊಂಡಿರುವ ಪ್ರಚಾರ ಜಾಥಾ 26ರಿಂದ ಬಸವಕಲ್ಯಾಣದಿಂದ ಆರಂಭಗೊಂಡಿದೆ. ಫೆ.6ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಾರ್ವಜನಿಕರ ಸಮಾರಂಭದ ಮೂಲಕ ಜಾಥಾ ಕೊನೆಗೊಳ್ಳಲಿದ್ದು, ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದು ಜಾಥಾ ಸಂಚಾಲಕ ವಿರೇಶ ಹೇಳಿದರು.
ಪಟ್ಟಣಕ್ಕೆ ಬುಧವಾರ ಆಗಮಿಸಿದ್ದ ಜಾಥಾವನ್ನು ಸ್ಥಳೀಯ ಸಾಮಾಜಿಕ ಕಾರ್ಯಾಕರ್ತರು ಸ್ವಾಗತಿಸಿಕೊಂಡರು. ಬಳಿಕ ಬಹಿರಂಗ ಸಭೆಯಲ್ಲಿ ಮುಖಂಡರು ಮಾತನಾಡಿದರು. ಆಹಾರ ಭದ್ರತೆ, ಉದ್ಯೋಗದ ಉಳಿವು, ಜೀವನಾವಶ್ಯಕ ವಸ್ತುಗಳು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ. ವಿದ್ಯುತ್ ಕ್ಷೇತ್ರ, ಬ್ಯಾಂಕ್, ವಿಮೆ, ಆರ್ಥಿಕ ವಲಯ, ಸಾರ್ವಜನಿಕ ಉದ್ದಿಮೆಗಳ ಖಾಸಗೀರಕರಣ ವಿರುದ್ಧ ಹೋರಾಟ ನಡೆದಿದ್ದು, ಇದಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮುಖಂಡರು ಹೇಳಿದರು.
ಶರಣಬಡವ, ಎಂ.ಶೆಟ್ಟಿ, ಹೆಚ್.ಪದ್ಮ, ಪ್ರಕಾಶ್, ಬಾಬಾ ಜಾನಿ, ಖಾಜಾಹುಸೇನ್, ಮಹಿಬೂಬ, ಹಾಜಿಬಾಬಾ ಕರಡಕಲ್, ಗುರುಪಾದಪ್ಪ, ಸದ್ದಾಂ ಹುಸೇನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

