ಲಿಂಗಸುಗೂರು : ಉಪನ್ಯಾಸಕರಿಗೆ ಶೈಕ್ಷಣಿಕ ಕಾರ್ಯಗಾರ
ಲಿಂಗಸುಗೂರು : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಪದವಿ ಪೂರ್ವ ಉಪನ್ಯಾಸಕರ ಸಂಘದಿಂದ ಶೈಕ್ಷಣಿಕ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಡಿಡಿಪಿಐ ಸದಾಶಿವಪ್ಪ,ವಿದ್ಯಾರ್ಥಿಗಳು ಸತತವಾಗಿ ಅಧ್ಯಯನ ಮಾಡಬೇಕು, ಮಕ್ಕಳು ಸಮಯ, ಶಿಸ್ತು ಬದ್ದತೆ ಜೀವನಶೈಲಿ ಅಳವಡಿಸಿಕೊಳ್ಳಬೇಕು,ಉತ್ತಮ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಕಾಲೇಜು ಪ್ರಾಚಾರ್ಯ ಮುರೇಗೆಂದ್ರಪ್ಪ, ನರಸಪ್ಪ ಭಂಡಾರಿ,
ಕಮಲಾದೇವಿ, ಸೋಮಶೇಖರ ಬಳಗಾನೂರ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು.

