ದೃಢ ಆತ್ಮವಿಶ್ವಾಸವೇ ಸಾಧನೆಗೆ ರಹದಾರಿ : ನಾಗರತ್ನ
ಲಿಂಗಸುಗೂರು : ಸಂಸಾರ ಸಾಗರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುವ ಮಹಿಳೆಯರು ತ್ಯಾಗಮಯ ಜೀವನ ಸಾಗಿಸುತ್ತಿದ್ದಾರೆ. ಜೀವನದಲ್ಲಿ ಸಾಧನೆ ಮಾಡಲು ದೃಢ ಆತ್ಮವಿಶ್ವಾಸವೇ ರಹದಾರಿಯಾಗಿದೆ ಎಂದು ಬಳಗಾನೂರು ಪಟ್ಟಣದ ಅರುಣೋದಯ ಪದವಿ ಪೂರ್ವ ಕಾಲೇಜು
ಉಪನ್ಯಾಸಕಿ ನಾಗರತ್ನ ಗುತ್ತೇದಾರ ಹೇಳಿದರು.
ಸ್ಥಳೀಯ ಭಾರತೀಯ ವೈದ್ಯಕೀಯ ಸಭಾಂಗಣದಲ್ಲಿ ಉಮಾ ಮಹೇಶ್ವರಿ ಪದವಿ ಕಾಲೇಜಿನ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಯರು ಜೀವನದಲ್ಲಿ ಶ್ರದ್ಧೆ, ಆತ್ಮವಿಶ್ವಾಸ, ದೃಢ
ನಿರ್ಧಾರ, ಸಮರ್ಪಣಾ ಮನೋಭಾವ ಮೈಗೂಡಿಸಿಕೊಂಡರೆ ಸಾಧನೆಗೆ ಸಹಕಾರಿಯಾಗಲಿದ್ದು, ಮಹಿಳೆಯರು ಸಂಕುಚಿತ ಮನೋಭಾವ ತೊರೆದು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಕಾಲೇಜು ಆಡಳಿತಾಧಿಕಾರಿ ವಿನಯಕುಮಾರ ಗಣಾಚಾರಿ, ಖಜಾಂಚಿ ಮಹಾಂತಯ್ಯ ಗಣಾಚಾರಿ, ಪ್ರಾಚಾರ್ಯರಾದ ಮಲ್ಲಪ್ಪ ಚಿನ್ನಾಪುರ,ಜಿ.ವಿ.ಸುರೇಶ, ಮುಖ್ಯಗುರು ಶಕುಂತಲಾ, ಉಪನ್ಯಾಸಕರಾದ ಅಮರೇಶ ಕವಡಿಮಠ, ಚನ್ನಬಸಯ್ಯ ಹಿರೇಮಠ, ಮೌನೇಶ,ಶ್ರೀನಾಥ ಸೇರಿದಂತೆ ಇತರರು ಸಮಾರಂಭದಲ್ಲಿ ಇದ್ದರು.

