ಈಚನಾಳ : ಮಹಿಳಾ ಸಭಾಭವನ ನಿರ್ಮಾಣಕ್ಕೆ ಒತ್ತಾಯ
ಲಿಂಗಸುಗೂರು : ತಾಲೂಕಿನ ಈಚನಾಳ ಗ್ರಾಮದಲ್ಲಿ ಮಹಿಳೆಯರಿಗೆ ಸಭಾ ಭವನ ನಿರ್ಮಾಣ
ಮಾಡಿಕೊಡುವಂತೆ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದರು.
ಗ್ರಾ.ಪಂ. ಅದ್ಯಕ್ಷ ಆದಪ್ಪ ಎನ್.ಮೇಟಿಯವರಿಗೆ ಮನವಿ ಸಲ್ಲಿಸಿದ ಅವರು, ಗ್ರಾಮದಲ್ಲಿ ಮಹಿಳಾ ಸಂಘಟನೆಗಳಿಗೆ ಸಭೆಗಳನ್ನು ನಡೆಸಲು, ತರಬೇತಿ ಸೇರಿ ಮಹಿಳೆಯರ
ಕಾರ್ಯಕ್ರಮಗಳನ್ನು ಮಾಡಲು ಭನವದ ಅಗತ್ಯತೆ ಇದೆ. ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮದಲ್ಲಿ ಸುಸಜ್ಜಿತವಾದ ಮಹಿಳಾ ಸಭಾಭವನವನ್ನು ನಿರ್ಮಾಣ
ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಸಂಘದ ಅದ್ಯಕ್ಷೆ ಯಂಕಮ್ಮ ಮೇಟಿ, ಸರಸ್ವತಿ ಬಡಿಗೇರ್, ಪ್ರಮೀಳಾ ಮೇಟಿ,ದೇವಮ್ಮ, ವಿಜಯಲಕ್ಷ್ಮಿ ಕುಂಬಾರ, ಅಯ್ಯಪ್ಪ ಗಾಳಪೂಜಿ, ಶರಣಬಸವ ಈಚನಾಳ ಸೇರಿ
ಇತರರು ಈ ಸಂದರ್ಭದಲ್ಲಿ ಇದ್ದರು.

