ಕೋವಿಡ್ ಲಸಿಕೆ ಪಡೆಯಲು ಮುಂದಾಗಿ : ಸಂಸದ ಅಮರೇಶ್ವರ ನಾಯಕ ಕರೆ
ಲಿಂಗಸುಗೂರು : ಮಹಾಮಾರಿ ಕೊರೊನಾ ಸೊಂಕಿಗೆ ಕಡಿವಾಣ ಹಾಕಲು ಕೋವಿಡ್ ಲಸಿಕೆ ಪಡೆಯಲು
ಪ್ರತಿಯೊಬ್ಬರೂ ಮುಂದಾಗಬೇಕೆಂದು ಸಂಸದ ರಾಜಾ ಅಮರೇಶ್ವರ ನಾಯಕ ಕರೆ ನೀಡಿದರು.
ಗುರುವಾರ ಕೋವಿಡ್ ಲಸಿಕೆ ಪಡೆದ ಅವರು, ಮನುಷ್ಯನ ಸದೃಢ ಆರೋಗ್ಯಕ್ಕೆ ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗುವ ಈ ಲಸಿಕೆಯಿಂದ
ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ ಎನ್ನುವುದನ್ನು ಈಗಾಗಲೇ ವೈದ್ಯಕೀಯ ಪರೀಕ್ಷೆಗಳಲ್ಲಿ ಸಾಬೀತಾಗಿದೆ. ಕೊರೊನಾ ಎರಡನೇ ಅಲೆಯು ರಾಜ್ಯದಲ್ಲಿ ಶುರುವಾಗಿದೆ.
ಇನ್ನಾದರೂ ಸಾರ್ವಜನಿಕರು ಎಚ್ಚೆತ್ತುಕೊಂಡು ಕಡ್ಡಾಯವಾಗಿ ಲಸಿಕೆ ಪಡೆಯುವ ಮೂಲಕ
ರೋಗಮುಕ್ತರಾಗಬೇಕೆಂದು ಮನವಿ ಮಾಡಿದರು.
ಜಿ.ಪಂ. ಸದಸ್ಯೆ ರಾಣಿ ಜಯಲಕ್ಷ್ಮಿದೇವಿ, ಗುರುಗುಂಟ ಸಂಸ್ಥಾನಿಕ ರಾಜಾ ಸೋಮನಾಥ ನಾಯಕರೂ ಲಸಿಕೆ ಪಡೆದರು.ಮುಖಂಡ ಗಜೇಂದ್ರ ನಾಯಕ, ಆರೋಗ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಗುರುಗುಂಟ ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಕ್ರಮ್ ಪಾಟೀಲ್, ಡಾ.ಕಾವ್ಯ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್ ಜೋಶಿ, ಮಾಣಿಕ್ ಪ್ರಭು, ಮಂಜುನಾಥ, ಖಲೀಲ್, ಸುನಿಲ್‍ಸಿಂಗ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

