ಲಿಂಗಸುಗೂರು : ಭಾಜಪ ಮಹಿಳಾ ಮೋರ್ಚಾದಿಂದ ಲಸಿಕಾ ಅಭಿಯಾನ
ಲಿಂಗಸುಗೂರು : ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾದಿಂದ ಸ್ಥಳೀಯ ಐಎಂಎ ಹಾಲ್‍ನಲ್ಲಿ ಭಾನುವಾರ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ಈಗಾಗಲೇ ಕೋವಿಡ್ ಮಹಾಮಾರಿಯ ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದು, ಸಾರ್ವಜನಿಕರಿಗಾಗಿ ಕೇಂದ್ರ ಸರಕಾರ ಕೊಡುತ್ತಿರುವ ಉಚಿತ ಲಸಿಕಾ ಅಭಿಯಾನದಡಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳುವ ಮೂಲಕ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು.
3ನೇ ಅಲೆಯ ಬಗ್ಗೆ ನಿರ್ಲಕ್ಷ್ಯ ಮಾಡದೇ ಸಕಾಲಕ್ಕೆ ತಮ್ಮ ಸಮೀಪದ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಿಗೆ ತೆರಳಿ ಎರಡು ಡೋಸ್‍ಗಳನ್ನು ಹಾಕಿಸಿಕೊಳ್ಳಬೇಕೆಂದು ಮೋರ್ಚಾದ ಜಿಲ್ಲಾದ್ಯಕ್ಷೆ ವಿಜಯರಾಜೇಶ್ವರಿ ಗೋಪಶೆಟ್ಟಿ ಕರೆ ನೀಡಿದರು.
ಹಿರಿಯ ನಾಗರಿಕರು, ಮಹಿಳೆಯರು ಸೇರು ಹಲವು ಜನರಿಗೆ ಅಭಿಯಾನದಲ್ಲಿ ಲಸಿಕೆ ಹಾಕಲಾಯಿತು. ಮೋರ್ಚಾದ ರಾಜ್ಯ ಉಪಾದ್ಯಕ್ಷೆ ಶಿವಕೃಷ್ಣಮ್ಮ, ತಾಲೂಕು ಅದ್ಯಕ್ಷೆ ಜಯಶ್ರೀ ಸಕ್ರಿ, ಮುಖಂಡರಾದ ಶರಣಮ್ಮ ಕಾಮರೆಡ್ಡಿ, ಶಾರದಾ ರಾಠೋಡ್, ಸೀತಾ ನಾಯಕ, ಡಾ.ಶಿವಬಸಪ್ಪ, ಜಗನ್ನಾಥ ಕುಲಕರ್ಣಿ, ಬಸಮ್ಮ ಯಾದವ್, ಶೋಭಾ ಕಾಟವಾ, ಸುಷ್ಮಾ, ಶ್ವೇತಾ ಲಾಲಗುಂದಿ ಸೇರಿ ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
