ಚಿನ್ನದಗಣಿ ಅದ್ಯಕ್ಷರ ನಿವಾಸಕ್ಕೆ ಸಚಿವ ಮಾದುಸ್ವಾಮಿ ಭೇಟಿ : ಅಭಿವೃದ್ಧಿ ಚರ್ಚೆ
ಲಿಂಗಸುಗೂರು : ಹಟ್ಟಿ ಚಿನ್ನದ ಗಣಿಯ ಅದ್ಯಕ್ಷ ಮಾನಪ್ಪ ವಜ್ಜಲ್‍ರ ನಿವಾಸಕ್ಕೆ ಸಣ್ಣ ನೀರಾವರಿ ಸಚಿವ ಜೆ.ಸಿ.ಮಾದುಸ್ವಾಮಿ ಸೋಮವಾರ ಭೇಟಿ
ನೀಡಿದರು. ಸಚಿವರು ಭೇಟಿ ನೀಡಿದ್ದಕ್ಕೆ ಅವರಿಗೆ ಗೌರವಾರ್ಥವಾಗಿ ಚಿನ್ನದಗಣಿ ಅದ್ಯಕ್ಷರು ದಂಪತಿ ಸಮೇತರಾಗಿ ಸನ್ಮಾನಿಸಿ ಗೌರವಿಸಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ತಾಲೂಕಿನ ಕೆರೆಗಳ ಅಭಿವೃದ್ಧಿ, ಏತ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಉಭಯ ನಾಯಕರುಗಳು ಸುಧೀರ್ಘವಾಗಿ ಚರ್ಚಿಸಿದರು.
ಮುಖಂಡರಾದ ನಾಗಪ್ಪ ವಜ್ಜಲ್, ಡಾ.ಶಿವಬಸಪ್ಪ ಹೆಸರೂರು,ಶಂಕರಗೌಡ ಹಟ್ಟಿ, ಪುರಸಭೆ ಸದಸ್ಯ ಮುದುಕಪ್ಪ ನಾಯಕ,ಪ್ರಭುಸ್ವಾಮಿ ಅತ್ತನೂರು, ಜಗನ್ನಾಥ ಕುಲಕರ್ಣಿ, ಅಬ್ದುಲ್ಲಾ ಬೇಕರಿ,ವೆಂಕನಗೌಡ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

