ಸರಕಾರಿ ಆಸ್ಪತ್ರೆ ಮುಖ್ಯವೈದ್ಯಾಧಿಕಾರಿಯಾಗಿ ಡಾ.ರುದ್ರಗೌಡ : ಕರವೇ ಸನ್ಮಾನ
ಲಿಂಗಸುಗೂರು : ಸ್ಥಳೀಯ ಸರಕಾರಿ ಆಸ್ಪತ್ರೆಗೆ ಮುಖ್ಯ
ವೈದ್ಯಾಧಿಕಾರಿಯಾಗಿ ಡಾ.ರುದ್ರಗೌಡ ಅವರು ನೇಮಕವಾಗಿದ್ದಾರೆ. ಈ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ವೈದ್ಯಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಕರವೇ ಅದ್ಯಕ್ಷ ಜಿಲಾನಿಪಾಷಾರ ನೇತೃತ್ವದಲ್ಲಿ ಜಮಾಯಿಸಿದ
ಕರವೇ ಕಾರ್ಯಕರ್ತರು, ಈ ಹಿಂದೆ ತಾಲೂಕು
ಆರೋಗ್ಯಾಧಿಕಾರಿಗಳಾಗಿದ್ದ ಡಾ.ರುದ್ರಗೌಡರು ಸರಕಾರಿ ಆಸ್ಪತ್ರೆಗೆ ಮುಖ್ಯವೈದ್ಯಾಧಿಕಾರಿಳಾಗಿ ಬಂದಿರುವುದು ಸಂತಸ ತಂದಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಬೇಕಾದ ಔಷಧಗಳ ಕೊರತೆ ಆಗದಂತೆ ಬರುವ ದಿನಗಳಲ್ಲಿ ಸುವ್ಯಸ್ಥಿತವಾಗಿ ಆಸ್ಪತ್ರೆಯ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕೋರಿದರು.
ಕರವೇ ಮುಖಂಡರಾದ ಅಜೀಜಪಾಷಾ, ಹನುಮಂತ ನಾಯಕ,ಹನುಮಂತಪ್ಪ ಭಜಂತ್ರಿ, ಇರ್ಫಾನ್ ಖುರೇಶಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

