ಕೇಂದ್ರ ಸರಕಾರದ ರೈತವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲು ಆಗ್ರಹ
ಲಿಂಗಸುಗೂರು : ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ ಕಾಯ್ದೆ-2020 ರೈತರ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಕರೆ ಕೊಟ್ಟಿರುವ ಬಂದ್‍ಗೆ ಬೆಂಬಲಿಸಿ, ಬಹುಜನ ಸಮಾಜ ಪಕ್ಷದ ಮುಖಂಡರುಗಳು ಪ್ರತಿಭಟನೆ ನಡೆಸಿದರು.
ಶಿರಸ್ತೆದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಅವರು, ದೇಶದ ಸಂಪತ್ತನ್ನು ಕಬಳಿಸಿರುವ ಬಂಡವಾಳ ಶಾಹಿಗಳಾದ ಅಂಬಾನಿ, ಅದಾನಿ ಸೇರಿದಂತೆ ಹಲವಾರು ಕ್ಯಾಪಿಟಲಿಸ್ಟ್‍ಗಳಿಗೆ ಅನುಕೂಲಕರವಾಗುವಂತೆ ಮೋದಿ ಸರಕಾರ ಕೃಷಿ ಕಾಯ್ದೆಯನ್ನು ರೂಪಿಸಿ ಈ ಕಾಯ್ದೆಗಳು ಜಾರಿಗೆ ಬಂದರೆ ಅನ್ನದಾತ ರೈತ ತನ್ನ ಎಲ್ಲಾ ಹಕ್ಕುಗಳನ್ನು, ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾಗುವ ಅಪಾಯವಿದೆ. ಕೂಡಲೇ ಕೇಂದ್ರ ಸರಕಾರ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪಕ್ಷದ ಅದ್ಯಕ್ಷ ಅನಿಲಕುಮಾರ, ಜಿಲ್ಲಾ ಕಾರ್ಯದರ್ಶಿ ಜಾವೀದ್‍ಪಾಷಾ, ಪ್ರದಾನ ಕಾರ್ಯದರ್ಶಿ ಅಮರೇಶ ಚಲುವಾದಿ, ಅಮರೇಶ ಆನೆಹೊಸೂರು, ಗದ್ದೆಪ್ಪ ಚಿತ್ತಾಪೂರ, ಶಶಿಕುಮಾರ ಕೆಸರಟ್ಟಿ, ಚಂದ್ರು ಬೆಂಡೋಣಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

