ಸಾರಿಗೆ ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಲಿಂಗಸುಗೂರು : ಕೆ.ಎಸ್.ಆರ್.ಟಿ.ಸಿ., ಬಿ.ಎಂ.ಟಿ.ಸಿ., ಎನ್.ಡಬ್ಲೂ.ಕೆ.ಆರ್.ಟಿ.ಸಿ., ಎನ್.ಇ.ಕೆ.ಆರ್.ಟಿ.ಸಿ ಸೇರಿ ನಾಲ್ಕು ನಿಗಮಗಳ ಸಾರಿಗೆ ಸಿಬ್ಬಂಧಿಗಳ ಬೇಡಿಕೆಗಳನ್ನು ಕೂಡಲೇ ಸರಕಾರ ಈಡೇರಿಸಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಸಾರಿಗೆ ಘಟಕಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು,ಆರೋಗ್ಯ ಭಾಗ್ಯ ವಿಮಾ ಯೋಜನೆ, ಕೋವಿಡ್‍ನಿಂದ ಮೃತಪಟ್ಟ ನೌಕರರಿಗೆ ತಲಾ 30 ಲಕ್ಷ ರೂಪಾಯಿ ವಿಮೆ ಜಾರಿ ಮಾಡಬೇಕು. ಅಂತರನಿಗಮ ವರ್ಗಾವಣೆ ಬಗ್ಗೆ ಸೂಕ್ತ ನೀತಿ ರಚಿಸಬೇಕು.
ತರಬೇತಿಯಲ್ಲಿರುವ ನೌಕರರ ತರಬೇತಿ ಅವಧಿಯನ್ನು 2 ರಿಂದ 1 ವರ್ಷಕ್ಕೆ ಇಳಿಸಬೇಕು. ನಿಗಮದಲ್ಲಿ ಹೆಚ್.ಆರ್.ಎಂ.ಎಸ್.(ಮಾನವ ಸಂಪನ್ಮೂಲ) ವ್ಯವಸ್ಥೆ ಜಾರಿಗೊಳಿಸಬೇಕು. ಕರ್ತವ್ಯ ನಿರತ ಸಾರಿಗೆ ಸಿಬ್ಬಂಧಿಗಳಿಗೆ ಭತ್ಯೆ ಜಾರಿಗೊಳಿಸಬೇಕು. ಘಟಕ ವ್ಯವಸ್ಥೆಯಲ್ಲಿ ಕಿರುಕುಳ
ತಪ್ಪಿಸಲು ಸೂಕ್ತ ಆಡಳಿತ ವ್ಯವಸ್ಥೆ ಮಾಡಬೇಕು. ಎನ್.ಐ.ಎನ್.ಸಿ. ಬದಲಾಗಿ ಪರ್ಯಾಯ ವ್ಯವಸ್ಥೆ
ರೂಪಿಸಬೇಕು. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಪರಿಗಣಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂಘಟನೆಯ ಕಲ್ಯಾಣ ಕರ್ನಾಟಕ ಅದ್ಯಕ್ಷ ಗದ್ದೆನಗೌಡ ಪಾಟೀಲ್, ತಾಲೂಕು ಅದ್ಯಕ್ಷ ಪರಮೇಶ ಗೋರ್, ಪ್ರದಾನ ಕಾರ್ಯದರ್ಶಿ ಮೌನೇಶ ಪೂಜಾರಿ, ಶೀಲವಂತ ಹಣಗಿ, ಶಿವರಾಜ ಐದಭಾವಿ,ನಾಗಪ್ಪ ಬಿಚಗಲ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

