ರಾಯಚೂರು

ಲಿಂಗಸುಗೂರು : ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಲಿಂಗಸುಗೂರು : ನಿತ್ಯದ ಬಳಕೆ ವಸ್ತುಗಳ ಜೊತೆಗೆ ತೈಲ, ಅನಿಲ ಬೆಲೆಗಳು ಗಗನಕ್ಕೇರಿದ್ದು, ಕೂಡಲೇ ಜನಸಾಮಾನ್ಯರ
ಕೈಗೆಟುಕುವ ದರದಲ್ಲಿ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು
ಆಗ್ರಹಿಸಿ ಜೈ ಭಾರತ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಸಹಯಕ ಆಯುಕ್ತರ ಕಚೇರಿ ಅಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಅವರು, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿ ದಿನಬಳಕೆ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಪರಿಣಾಮ ಬಡವರು, ದಿ
ನಗೂಲಿಗಳು, ಸಾಮಾನ್ಯರು, ಮಧ್ಯಮ ವರ್ಗದವರ ಬದುಕು ಸಾಗಿಸುವುದು ಕಡುಕಷ್ಟವಾಗಿದೆ. ಕೂಡಲೇ ಸರಕಾರ ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಬಡವರ ಕೈಗೆಟುವ ದರಗಳನು ನಿಗದಿಮಾಡಬೇಕೆಂದು ಒತ್ತಾಯಿಸಿದರು.

ಭಾರವೇ ಅದ್ಯಕ್ಷ ಅಬ್ದುಲ್ ಸತ್ತಾರ ಸೇರಿ ಸಂಘಟನೆ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!