ಗ್ರಾಮ ಪಂಚಾಯತ್ ಸದಸ್ಯರಿಗೆ ಅಭಿನಂದನೆ, ಪಕ್ಷ ಸೇರ್ಪಡೆ ಸಮಾರಂಭ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬೇಡಿ : ವಜ್ಜಲ್ ಕಿವಿಮಾತು
ಲಿಂಗಸುಗೂರು : ಸರಕಾರದ ಯೋಜನೆಗಳನ್ನು ಸದ್ಬಳಕೆ
ಮಾಡಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ
ಮುಂದಾಗಬೇಕು. ಅಭಿವೃದ್ಧಿ ವಿಷಯದಲ್ಲಿ ಪಕ್ಷಾತೀತವಾಗಿ
ಸದಸ್ಯರುಗಳು ಶ್ರಮಿಸಬೇಕು. ಚುನಾವಣೆ ಸಂದರ್ಭಕ್ಕೆ ಮಾತ್ರ ರಾಜಕೀಯವನ್ನು ಸೀಮಿತವಾಗಿಡಬೇಕು.
ಅಭಿವೃದ್ಧಿಯಲ್ಲಿ ರಾಜಕೀಯವನ್ನು ಬೆರೆಸಬೇಡಿ ಎಂದು ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ಕಿವಿಮಾತು ಹೇಳಿದರು.ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸದಸ್ಯರಿಗೆ ಸ್ಥಳೀಯ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ಅಭಿನಂದನಾ ಸಮಾರಂಭ ಹಾಗೂ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳ್ಳಿಗಳಲ್ಲಿ
ಕೆಲಸವಿಲ್ಲದೇ ಜನ ಗುಳೇ ಹೋಗುತ್ತಿರುವುದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಪಂಚಾಯತ್ ಆಡಳಿತ ಮಂಡಳಿಗಳು ಬಡ ಕೂಲಿಕಾರ್ಮಿಕರಿಗೆ ಸರಕಾರದ ನಿಯಮಾನುಸಾರ ಕೆಲಸ ನೀಡಿ, ಅವರ ಉಪಜೀವನಕ್ಕೆ
ಆಸರೆಯಾಗಬೇಕು. ಜೊತೆಗೆ ಸರಕಾರದ ಯೋಜನೆಗಳನು
ಸದ್ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮೀಣ ಪ್ರದೇಶದ
ಅಭಿವೃದ್ಧಿಗೆ ಮುಂದಾಗಬೇಕೆಂದು ಕರೆ ನೀಡಿದರು.
ಪಕ್ಷ ಸೇರ್ಪಡೆ
ಕಾಂಗ್ರೆಸ್ ಜೆಡಿಎಸ್ ಪಕ್ಷವನ್ನು ತೊರೆದು ಚಿನ್ನದಗಣಿ ಅದ್ಯಕ್ಷರ ಸಮ್ಮುಖದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜೀವಲೆಪ್ಪ ನಾಯಕ್,ಬಸವನಗೌಡ ಚಿತಾಪೂರ,ಗುರುಗುಂಟ ಭಾಗದ ಅಮರೇಶ ರತ್ನಗಿರಿ
ನೇತೃತ್ವದಲ್ಲಿ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಜೆಪಿ ಮಂಡಲ ಅದ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ,
ಮುಖಂಡರಾದ ನಾಗಪ್ಪ ವಜ್ಜಲ್, ಗೋವಿಂದ ನಾಯಕ, ಡಾ.ಶಿವಬಸಪ್ಪ ಹೆಸರೂರು, ಶರಣಬಸಪ್ಪ ಗುಡದನಾಳ, ಗಜನ್ನಾಥ ಕುಲಕರ್ಣಿ,ಮುದುಕಪ್ಪ ನಾಯಕ, ಶಂಕರಗೌಡ ಬಳಗಾನೂರು, ರಮೇಶ ಕಟ್ಟಿಮನಿ, ಬಸಮ್ಮ ಯಾದವ್, ಶೋಭಾ ಕಾಟವೆ, ಶ್ವೇತಾ ಲಾಲಗುಂದಿ, ಜ್ಯೋತಿ
ಸುಂಕದ್ ಸೇರಿ ಹಲವರು ಸಮಾರಂಭದಲ್ಲಿ ಇದ್ದರು.

