ಲಿಂಗಸುಗೂರಿನಲ್ಲಿ ಮೊದಲ ಜಿಲ್ಲಾ ಮಟ್ಟದ ಜಾನಪದ ಸಮ್ಮೇಳನ ಜಾನಪದ ಕ್ಷೇತ್ರದ ಸಂಶೋಧನೆಗೆ ಸರಕಾರ ಮುಂದಾಗಬೇಕು : ಗಾಣದಾಳ
ಖಾಜಾಹುಸೇನ್
ಸಜ್ಜಲಶ್ರೀ ವೇದಿಕೆ
ಲಿಂಗಸುಗೂರು : ಶೃಂಗಾರ ಕಲೆಗಳಾದ ಕಚ್ಚೆ ಕಲೆ ಮತ್ತು
ರಂಗೋಲಿ ಕಲೆ, ಕೇಶ ವಿನ್ಯಾಸ, ಬುಟ್ಟಿ ಹೆಣೆಯುವ ಕಲೆ, ಇವೆಲ್ಲಾ ಇಂದು ನಮ್ಮಿಂದ ಅಜ್ಞಾನದತ್ತ ಸಾಗುತ್ತಿವೆ. ಉಪಮಾತೀತವಾದ ಈ ಜಾನಪದ ಸಾಹಿತ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಸರಕಾರ ಸಾಕಷ್ಟು ಸಂಶೋಧನೆಗಳನ್ನು ಕೈಗೊಳ್ಳಬೇಕಿದೆ. ಜಾನಪದ ಸಾಹಿತ್ಯದ ಬಗ್ಗೆ ಹೆಚ್ಚೆಚ್ಚು ಪುಸ್ತಕಗಳು ಪ್ರಕಟಗೊಳ್ಳಬೇಕಿದೆ ಎಂದು ಸಾಹಿತಿ ಡಾ.
ಲಿಂಗಣ್ಣ ಗಾಣದಾಳ ಆಶಯ ವ್ಯಕ್ತಪಡಿಸಿದರು.
ಸ್ಥಳೀಯ ಸರಕಾರಿ ಪದವೀ ಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ ಮಟ್ಟದ ಪ್ರಥಮ ಜಾನಪದ ಸಮ್ಮೇಳನ ತಾಲೂಕು ಮಹಿಳಾ ಘಟಕದ ಪದಗ್ರಹಣ,ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ
ಅವರು, ಜನಪದ ಕಲೆಗಳ ವಿವರಗಳೆಂದರೆ ಜನಪದ ಜೀವನ ಸಂಸ್ಕøತಿಗಳ ವಿವರಗಳೇ ಆಗಿವೆ. ಕುರಿತೋದದೆಯಂ ಕಾವ್ಯ್ ಪ್ರಯೋಗ ಮತಿಗಳೆಂದು ಕವಿರಾಜ ಮಾರ್ಗರು ಕರೆದಿರುವಂತ
ಜನಪದ ಸಾಹಿತ್ಯವನ್ನು ಉಳಿಸಿಕೊಟ್ಟ ದುಡಿಯುವ ವರ್ಗವು ಅಕ್ಷರಾಭ್ಯಾಸವಿಲ್ಲದೇ ಅನುಭಾವದ ಮೂಲಕ ನಿತ್ಯ ಜೀವನದಲ್ಲಿ ಕಂಡುಂಡ ವಸ್ತುಗಳನ್ನೇ ಕಾವ್ಯವಾಗಿಸಿದ ಜನಪದ ಸಾಹಿತ್ಯವು ಬಾಯಿಂದ ಬಾಯಿಗ
ಹರಿದು ಬಂದು ನಮ್ಮ ಸಂಸ್ಕøತಿಯನ್ನು ಉಳಿಸುವ ವಾಹಕವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಜಾನಪದ ಸಮಗ್ರ ಸಾಹಿತ್ಯವನ್ನು
ಅವಲೋಕಿಸಿದಾಗ ಪ್ರತಿ ಊರುಗಳಲ್ಲಿ ಒಂದೊಂದು ಪ್ರಕಾರದ ಕಲೆ-ಕಲಾವಿದರು ದೊರೆಯುತ್ತಾರೆ. ಅವರ ಪೂರ್ಣ ವಿವರಗಳನ್ನು ಹೆಕ್ಕಲು ಸಾಧ್ಯವಾಗದಿದ್ದರೂ, ನಮ್ಮ ಜಿಲ್ಲೆಯ ದಾಸ-ಶರಣ, ಅನುಭಾವ ಸಾಹಿತ್ಯ,ಬಂಡಾಯ ಸಾಹಿತ್ಯ, ಗಜಲ್ ಸಾಹಿತ್ಯ ಹೀಗೆ ಹಲವು ಹೊಸ ಮಜಲುಗಳನ್ನುು ನೀಡಿದ ಜಿಲ್ಲೆಯಲ್ಲಿ ಜಾನಪದ ಸಾಹಿತ್ಯದ ಹರವು ಬಹು ವಿಸ್ತಾರವಾದದ್ದಾಗಿದೆ.
ರಂಗಭೂಮಿ, ಸಾಂಧರ್ಬಿಕ ಕಲೆಗಳು, ಮೊಹರಂ ಹಾಡುಗಳು,ಡೊಳ್ಳಿನ ಹಾಡುಗಳು, ಭಜನೆ, ದೊಂಬಿದಾಸರು, ಗೊಂದಲಿಗರು,ಹೆಜ್ಜೆಮೇಳ, ಮಹಿಳಾ ಜಾನಪದ ಹೀಗೆ ನಮ್ಮ ಸಂಸ್ಕøತಿಯ ಹಿರಿಮೆಯನ್ನು ಮೈಗೂಡಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಯುವ ಪೀಳಿಗೆ ಬೆಳೆಸಿಕೊಳ್ಳಬೇಕು. ಮಗುವನ್ನು ತೊಟ್ಟಿಲಿಗೆ ಹಾಕುವಾಗ ಒಗಟು ಹೇಳುವುದು ಜೋಗುಳದ ಹಾಡುಗಳು ಹಾಡುವುದು, ಆದಾವ
ನಮ್ಮ ಜ್ವಾಳ ಉಳಿದಾವ ನಮ್ಮ ಹಾಡು ಎಂಬಂತೆ ಜನಪದ ಹಾಡುಗಳ ಪೂರ್ಣ ವಿವರಗಳಾಗಲಿ ಪೂರ್ಣಗೊಳಿಸಲು ಹಲವು ಪ್ರಬಂಧಗಳ ಅವಶ್ಯಕತೆೆ ಇದೆ. ಈ ನಿಟ್ಟಿನಲ್ಲಿ ಸರಕಾರ ಜಾನಪದ ಸಾಹಿತ್ಯದ ಉಳಿವಿಗೆ
ಮುಂದಾಗಬೇಕೆಂದು ಕರೆ ನೀಡಿದರು.
ಶಾಸಕ ಡಿ.ಎಸ್.ಹೂಲಗೇರಿ ಸಮ್ಮೇಳನದ ಅದ್ಯಕ್ಷತೆ ವಹಿಸಿದ್ದರು.ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ, ಹಟ್ಟಿ ಚಿನ್ನದಗಣಿ ಅದ್ಯಕ್ಷ ಮಾನಪ್ಪ ವಜ್ಜಲ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾದ್ಯಕ್ಷ ಡಾ.ಶರಣಪ್ಪ ಆನೆಹೊಸೂರು, ಜಿಲ್ಲಾ ಮಹಿಳಾ ಘಟಕದ ಅದ್ಯಕ್ಷೆ ಡಾ.ಅರುಣಾ ಹಿರೇಮಠ, ತಾಲೂಕು ಅದ್ಯಕ್ಷ ಮಹೇಂದ್ರ ಕುರ್ಡಿ, ತಾಲೂಕು ಅದ್ಯಕ್ಷೆ ಲಕ್ಷ್ಮಿದೇವಿ ನಡುವಿನಮನಿ ಸೇರಿ ಸಾಹಿತಿಗಳು, ವಿವಿಧ ರಾಜಕೀಯಪಕ್ಷಗಳ ಮುಖಂಡರುಗಳು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಸಂಜೆಹೊತ್ತು ಜಾನಪದ ಕಲಾವಿದ ಗುರುರಾಜ
ಹೊಸಕೋಟೆಯವರಿಂದ ಜಾನಪದ ಸಂಜೆ ಕಾರ್ಯಕ್ರಮ ಜರುಗಿತು.ಕರುನಾಡ ರಕ್ಷಣಾ ಸಮಿತಿ ವತಿಯಿಂದ ಜಾನಪದ ನೃತ್ಯ ಕಾರ್ಯಕ್ರಮ ಜರುಗಿತು. ಬಯಲಾಟ, ಬುರ್ರಕತೆ, ಸೋಬಾನೆ ಹಾಡು, ತತ್ವಪದ,ಕೋಲಾಟ ಮತ್ತು ಹಂತಿಹಾಡು, ಕಂಸಾಳೆ ಸೇರಿ ಜಾನಪದ ಕಲೆಗಳ ಝೇಂಕಾರ ಕಾರ್ಯಕ್ರಮ ಜರುಗಿತು. ಜಾನಪದ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

