ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಣೆ
ಲಿಂಗಸುಗೂರು : ಸ್ಥಳೀಯ ಗುರುಭವನದಲ್ಲಿ ಮಾದಿಗ ಮಹಾಸಭಾದ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್‍ರ 114ನೇ ಜಯಂತಿಯನ್ನು ಆಚರಿಸಲಾಯಿತು.
ಸಭೆಯಲ್ಲಿ ಸೇರಿದ್ದ ಮುಖಂಡರು ಡಾ.ಬಾಬು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.ಜಗಜೀವನರಾಮ್‍ರ ಸಮಾನತೆ, ಸಮಾಜ ಸುಧಾರಣೆ ಚಿಂತನೆಗಳನ್ನು ಮೈಗೂಡಿಸಿಕೊಂಡು ಯುವ ಪೀಳಿಗೆ ಅಸಮಾನತೆಯ ವಿರುದ್ಧ ಹೋರಾಟ ಮಾಡಬೇಕೆಂದು ಮಹಾಸಭಾದ
ಅದ್ಯಕ್ಷ ರಮೇಶ ಗೋಸ್ಲೆ ಕರೆ ನೀಡಿದರು.
ಮುಖಂಡರಾಧ ಕುಪ್ಪಣ್ಣ ಹೊಸಮನಿ, ಮೋಹನ್ ಗೋಸ್ಲೆ, ಶಿವರಾಜ ಕೆಂಭಾವಿ, ಅಮರಯ್ಯ ಘಂಟಿ, ಹನುಮಂತ ಕನ್ನಾಳ, ಆಂಜನೇಯ ಭಂಡಾರಿ,ನಾಗರಾಜ ಮುಂದಿನಮನಿ, ಶ್ರೀನಿವಾಸ ಭಂಡಾರಿ, ಮಂಜುನಾಥ ಪಾಟೀಲ್, ನಾಗರಾಜ
ಯರಡೋಣ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

