ರಾಯಚೂರು

173 ಗ್ರಾಮ ಪಂಚಾಯತ್‌ಗಳಿಗೆ 3,47೦ ಸದಸ್ಯರ ಆಯ್ಕೆ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ:ಆರ್. ವೆಂಕಟೇಶ ಕುಮಾರ್


ರಾಯಚೂರು,ಡಿ.೦7:- ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯನ್ನು ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಇಂದಿನಿAದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಚುನಾವಣಾ ಆಯೋಗದ ನಿರ್ದೇಶನದಂತೆ ಹಾಗೂ ನ್ಯಾಯಸಮ್ಮತವಾಗಿ ನಿರ್ವಹಿಸಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ತಿಳಿಸಿದರು.
ಅವರು ಡಿ.೭ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ರಾಯಚೂರು ವಿಭಾಗದ ೯೩ ಮತ್ತು ಲಿಂಗಸೂಗೂರು ವಿಭಾಗದ ೮೦ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ನಡೆಯಲಿದೆ. ರಾಯಚೂರು, ದೇವದುರ್ಗ, ಮಾನವಿ, ಸಿರವಾರ ತಾಲೂಕಗಳ ಚುನಾವಣೆ ಮೊದಲ ಹಂತದಲ್ಲಿ ಮತ್ತು ಲಿಂಗಸೂಗೂರು ಮತ್ತು ಸಿಂಧನೂರು, ಮಸ್ಕಿ ತಾಲೂಕಗಳ ಪಂಚಾಯತ್ ಚುನಾವಣೆ ಎರಡನೇ ಹಂತದಲ್ಲಿ ನಡೆಯಲಿದೆ. ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದು ನೀತಿ ಸಂಹಿತೆ ಮೇಲುಸ್ತುವಾರಿಗಾಗಿ ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಜಿಲ್ಲಾ ಮತ್ತು ಉಪವಿಭಾಗ ಮಟ್ಟದ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿದೆ. ಪ್ರತಿ ತಾಲೂಕಿಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮೊದಲ ಹಂತದಲ್ಲಿ ಡಿ.೧೧ ವರೆಗೆ, ಎರಡನೇ ಹಂತದಲ್ಲಿ ಡಿ.೧೬ ವರೆಗೆ ನಡೆಯಲಿದೆ. ಡಿ.೧೨ ಮತ್ತು ೧೭ ರಂದು ನಾಮಪತ್ರಗಳ ಪರಿಶೀಲನೆ ನಡೆಸಿ ಡಿ.೨೨ ಮತ್ತು ಡಿ.೨೭ ರಂದು ಅವಶ್ಯಕವಿರುವ ಕ್ಷೇತ್ರಗಳ ಚುನಾವಣೆ ನಡೆಸಲಾಗುತ್ತದೆ. ಬ್ಯಾಲೇಟ್ ಪೇಪರ್ ಮೂಲಕ ಮತದಾನ ನಡೆಯಲಿದೆ. ೧,೨೬೫ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಹೆಚ್ಚುವರಿಯಾಗಿ ೪೨೮ ಮತದಾನ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು ೩,೪೭೦ ಸದಸ್ಯ ಸ್ಥಾನಗಳಿಗೆ ೧೧,೨೮,೦೬೦ ಮತದಾರರು ಹಕ್ಕು ಚಲಾಯಿಸಲಿದ್ದಾರೆ, ಆಯಾ ತಾಲೂಕಿನಲ್ಲಿಯೇ ಮತ ಏಣಿಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿರುವ ೧೭೯ ಗ್ರಾಮ ಪಂಚಾಯತ್‌ಗಳ ಪೈಕಿ ೧೭೩ ಗ್ರಾಮ ಪಂಚಾಯತ್‌ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ದೇವದುರ್ಗ ತಾಲೂಕಿನ ಕರಡಿಗುಡ್ಡ, ಚಿಂಚೋಡಿ ಮತ್ತು ಜಾಲಹಳ್ಳಿ ಗ್ರಾಮ ಪಂಚಾಯ್ತಿಗಳು ಮೇಲ್ದರ್ಜೆಗೆರಿದ್ದರಿಂದ ಚುನಾವಣೆ ನಡೆಯುತ್ತಿಲ್ಲ. ಶಾವಂತಗೇರಾ ಮತ್ತು ಹೇಮನಾಳ ಗ್ರಾಮ ಪಂಚಾಯತ್ ಮೀಸಲಾತಿ ಕುರಿತು ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿರುವ ಕಾರಣ ಚುನಾವಣೆ ನಡೆಯುತ್ತಿಲ್ಲ. ಲಿಂಗಸೂಗೂರು ತಾಲೂಕಿನ ರೋಡಲಬಂಡಾ ಗ್ರಾಮ ಪಂಚಾಯತಿ ಅಧಿಕಾರ ಅವಧಿ ೨೦೨೧ ಮೇ.೨೧ಕ್ಕೆ ಅವಧಿ ಪೂರ್ಣಗೊಳ್ಳುವದರಿಂದ ಚುನಾವಣೆ ನಡೆಯುತ್ತಿಲ್ಲ ಎಂದರು.
ಪ್ರತಿ ಮತಗಟ್ಟೆಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ನಿಯೋಜಿಸಲಾಗಿದೆ, ಚುನಾವಣೆಯಲ್ಲಿ ಯಾವುದೇ ಅಕ್ರಮಗಳು, ಚುನಾವಣಾ ಬಾಹಿರ ಚಟುವಟಿಕೆಗಳು ನಡೆದಿರುವದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಎಚ್. ದುರಗೇಶ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!