ರಾಜ್ಯರಾಯಚೂರು

ಬಸವಸಾಗರ ಜಲಾಶಯಕ್ಕೆ ಹಿನ್ನೀರು ಸ್ಥಗಿತ : ಗೇಟ್ ಬಂದ್

ಲಿಂಗಸುಗೂರು : ಕಳೆದ ವಾರವಷ್ಟೇ ಪ್ರವಾಹದಿಂದ ಜನರಲ್ಲಿ ಆತಂಕ ಮೂಡಿಸಿದ್ದ ಕೃಷ್ಣಾ ನದಿ ಈಗ ನೀರಿಲ್ಲದೇ ಮೌನವಾಗಿದೆ. ಬಸವಸಾಗರ ಜಲಾಶಯಕ್ಕೆ ಹರಿದುಬರುವ ಹಿನ್ನೀರು ಸ್ಥಗಿತಗೊಂಡ ಪರಿಣಾಮ ಅಣೆಕಟ್ಟೆಯ ಎಲ್ಲಾ ಕ್ರಸ್ಟ್‍ಗೇಟ್‍ಗಳನ್ನು ಬಂದ್ ಮಾಡಲಾಗಿದೆ.


ಬುಧವಾರ ಸಂಜೆ 6 ಗಂಟೆ ಸುಮಾರಿಗೆ ಜಲಾಶಯದಲ್ಲಿ 491.77 ಮೀಟರ್ ನೀರು ಸಂಗ್ರಹವಾಗಿದ್ದು, ಒಳಹರಿವು 00 ಕ್ಯೂಸೆಕ್ ಹೊರಹರಿವು 00 ಕ್ಯೂಸೆಕ್ ಇದೆ. 33.31 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಇರುವ ಜಲಾಶಯದಲ್ಲಿ 31.09 ಟಿಎಂಸಿ ನೀರು ಸಂಗ್ರಹವಿದೆ.

Leave a Reply

Your email address will not be published. Required fields are marked *

error: Content is protected !!