ಕೋವಿಡ್ ನಿಯಮ ಉಲ್ಲಂಘನೆ : 18 ಜನರ ಮೇಲೆ ಕೇಸ್
ಲಿಂಗಸುಗೂರು : ತಾಲೂಕಿನ ಚಿತ್ತಾಪೂರ ಗ್ರಾಮದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ಹಾಗೂ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವ ಪರಿಣಾಮ ಕಾಂಗ್ರೆಸ್ ಮುಖಂಡ ಚೆನ್ನಾರೆಡ್ಡಿ ಬಿರಾದಾರ ಸೇರಿ 18 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಸ್ಥಳೀಯ ಠಾಣೆ ಪಿಎಸ್‍ಐ ಪ್ರಕಾಶರೆಡ್ಡಿ ಡಂಬಳ್ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿ, ಚಿತ್ತಾಪೂರ ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆಯ ನಿಮಿತ್ಯ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಲಾಕ್‍ಡೌನ್ ಇರುವುದರಿಂದ ಯಾವುದೇ ಸಾರ್ವಜನಿಕ ಜಾತ್ರೆ ಮಾಡಬಾರದೆಂಬ ಸರಕಾರದ ಹಾಗೂ ಜಿಲ್ಲಾಧಿಕಾರಿಗಳ ಆದೇಶವಿದ್ದಾಗ್ಯೂ ಉದ್ದೇಶಪೂರ್ವಕವಾಗಿಯೇ ಜಾತ್ರೆ ನೆಪದಲ್ಲಿ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಿದ್ದು ಅಪರಾಧವಾಗಿದೆ. ರಾಜ್ಯ ಸರಕಾರವು ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟಲು ಹೊರಡಿಸಿರುವ ಮಾರ್ಗಸೂಚಿಗಳನ್ನು ಆರೋಪಿತರು ಉಲ್ಲಂಘಿಸಿದ್ದರಿಂದ ಪ್ರಕರಣ ದಾಖಲಾಗಿದೆ.
ಚೆನ್ನಾರೆಡ್ಡಿ ಬಿರಾದಾರ್, ರಂಗಪ್ಪ ಯಮನಪ್ಪ ನಾಯಕ, ಸಾಭಾಸ್ ಯಲ್ಲಪ್ಪ ಚವ್ಹಾಣ, ರಾಜು ಯಲ್ಲಪ್ಪ ಚವ್ಹಾಣ, ಪರಶುರಾಮ ಮರಿಯಪ್ಪ ಜಮಖಂಡಿ, ಭರಮಣ್ಣ ಸೀಳೆಕ್ಯಾತರ, ಶಿವರಾಜ ಕಟ್ಟಿಮನಿ, ಯಲ್ಲಪ್ಪ ಬೆಳ್ಳಿಯಪ್ಪ ಶಿಳ್ಳೆಕ್ಯಾತರ, ಶಂಕರ್ ಶಿಳ್ಳೇಕ್ಯಾತರ, ದೇಸಾಯಿ ಮಲ್ಲಪ್ಪ ಕೊಡ್ಲಿ, ಸಂಗನಬಸವ ಬಸಪ್ಪ ದಲಾಲಿ, ಪಸರಪ್ಪ ತಮ್ಮಣ್ಣ ಉಕ್ಕಲಿ, ಕಿರಣಕುಮಾರ ಹನುಮಂತ ಹುನಕುಂಟಿ, ದ್ಯಾಮಣ್ಣ ದುರುಗಪ್ಪ, ರಾಮಣ್ಣ ಶಿಳ್ಳೆಕ್ಯಾತರ, ಗುರಪ್ಪ ಚಂದಪ್ಪ ತುರಡಗಿ, ಮುತ್ತಪ್ಪ ಶಿಳ್ಳೆಕ್ಯಾತರ, ಕುಮಾರ ಶಿಳ್ಳೆಕ್ಯಾತರ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ.

