ರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ
ಲಿಂಗಸುಗೂರು : ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ತಾಲೂಕಿನ ಗುಂತಗೋಳ ಗ್ರಾಮದ ಶ್ರೀಶಕ್ತಿ ಮಠದ ಶ್ರೀಗಳು ಚಾಲನೆ ನೀಡಿದರು.
ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಾಯ ಮಾಡಬೇಕು. ಶ್ರೀರಾಮನ ಅನುಗ್ರಹ ನಮ್ಮೆಲ್ಲರ ಮೇಲಿದೆ ಎಂದು ಶ್ರೀಗಳು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾದ ಪ್ರದಾನ ಕಾರ್ಯದರ್ಶಿ ಶ್ವೇತಾ ಲಾಲಗುಂದಿ, ಜ್ಯೋತಿ ಸುಂಕದ, ಶೋಭಾ ಕಾಟವೆ ಗ್ರಾಮಸ್ಥರಾದ ದುರೇಶ ನಾಯಕ, ಕೃಷ್ಣಾ, ಶರಣಪ್ಪ, ಅಯ್ಯಪ್ಪಸ್ವಾಮಿ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

