ರಾಯಚೂರು

ಬ್ಯಾನರ್‍ಗಳಿಗೆ ಪರವಾನಿಗೆ ಕಡ್ಡಾಯಗೊಳಿಸಲು ಒತ್ತಾಯ

ಲಿಂಗಸುಗೂರು : ಪುರಸಭೆ ವ್ಯಾಪ್ತಿಯಲ್ಲಿ ಅನಗತ್ಯವಾಗಿ ಹಾಕುವ ಬ್ಯಾನರ್-ಬಂಟಿಂಗ್‍ಗಳಿಗೆ ಕಡಿವಾಣ ಹಾಕಿ ಕಡ್ಡಾಯವಾಗಿ ಪರವಾನಿಗೆ ಪಡೆದುಕೊಂಡೇ ಬ್ಯಾನರ್‍ಗಳನ್ನು ಹಾಕಲು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಶೆಟ್ಟಿ ಬಣ) ಕಾರ್ಯಕರ್ತರು ಒತ್ತಾಯಿಸಿದರು.

ಪುರಸಭೆ ವ್ಯವಸ್ಥಾಪಕ ವೆಂಕಟೇಶ್‍ರಿಗೆ ಮನವಿ ಸಲ್ಲಿಸಿದ ಅವರು, ಪಟ್ಟಣದ ವ್ಯಾಪ್ತಿಯಲ್ಲಿ ನೂರಾರು ಬ್ಯಾನರ್‍ಗಳನ್ನು ಅನವಶ್ಯಕವಾಗಿ ಹಾಕಲಾಗುತ್ತದೆ. ಇದರಿಂದ ಪಟ್ಟಣದ ಸೌಂದರ್ಯಿಕರಣಕ್ಕೆ ಧಕ್ಕೆಯಾಗುವ ಜೊತೆಗೆ ಸಾರ್ವಜನಿಕರಿಗೂ ಕಿರಿಕಿರಿಯಗುತ್ತದೆ.

ಕೂಡಲೇ ಪುರಸಭೆಯವರು ಪರವಾನಿಗೆ ಪಡೆಯದೇ ಹಾಕಿರುವ ಬ್ಯಾನರ್‍ಗಳನ್ನು ತೆರವುಗೊಳಿಸಬೇಕು. ಬರುವ ದಿನಗಳಲ್ಲಿ ಕಡ್ಡಾಯವಾಗಿ ಬ್ಯಾನರ್ ಹಾಕಲು ಪರವಾನಿಗೆ ಪಡೆಯಲು ಸಂಬಂಧಿಸಿದವರಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು.

ಕರವೇ ಅದ್ಯಕ್ಷ ಆಂಜನೇಯ ಭಂಡಾರಿ, ಭೀಮೇಶ್ ನಾಯಕ, ವೆಂಕಟೇಶ ಉಪ್ಪಾರ, ಭೀಮೇಶ ಆರ್.ನಾಯಕ, ಮೈನುದ್ದೀನ್ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

Leave a Reply

Your email address will not be published. Required fields are marked *

error: Content is protected !!