ಲಿಂಗಸುಗೂರು : ಬಸ್ಟಾಂಡ್ ಕಾಮಗಾರಿ ವೀಕ್ಷಿಸಿದ ಶಾಸಕ ಹೂಲಗೇರಿ
ಲಿಂಗಸುಗೂರು : ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಸ್ಥಳೀಯ ಬಸ್ ನಿಲ್ದಾಣ ಕಾಮಗಾರಿಯನ್ನು ಶಾಸಕ ಡಿ.ಎಸ್.ಹೂಲಗೇರಿ ವೀಕ್ಷಣೆ ಮಾಡಿದರು.
ಕೋವಿಡ್ ಲಾಕ್‍ಡೌನ್ ಬಳಿಕ ದಿನ ನಿಗದಿ ಮಾಡಿ ಉದ್ಘಾಟನೆಗೆ ಕ್ರಮ ಕೈಗೊಳ್ಳಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಸ್ಟಾಂಡ್‍ನಲ್ಲಿ ಪ್ರಯಾಣಿಕರಿಗೆ ಶುದ್ಧವಾದ ನೀರು, ವಿಶ್ರಾಂತಿಗೆ ಗುಣಮಟ್ಟದ ಆಸನಗಳ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಭೂಪನಗೌಡ ಕರಡಕಲ್, ಪುರಸಭೆ ಉಪದ್ಯಕ್ಷ ಮೊಹ್ಮದ್ ರಫಿ ಸೇರಿ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಮುಖಂಡರು ಈ ಸಂದರ್ಭದಲ್ಲಿ ಇದ್ದರು.

