ಜಪ್ತಿ ಬೈಕ್‍ಗಳ ಹರಾಜು : ಅಬಕಾರಿ ಕಚೇರಿ ಮುಂದೆ ನೂಕುನುಗ್ಗಲು
ಲಿಂಗಸುಗೂರು : ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ ದ್ವಿಚಕ್ರ ವಾಹನಗಳನ್ನು ನಿಯಮಾನುಸಾರ ಹರಾಜು ಮಾಡುವ ಪ್ರಕ್ರಿಯೆ ಮಂಗಳವಾರ ಸ್ಥಳೀಯ ಅಬಕಾರಿ ಕಚೇರಿಯಲ್ಲಿ ನಡೆಯಿತು.
ವಾಹನಗಳನ್ನು ಕೊಳ್ಳಲು ಜನರು ತಮ್ಮ ಹೆಸರುಗಳನ್ನು ನೋಂದಾಯಿಸಲು ನೂಕುನುಗ್ಗಲು ನಡೆಸಿದ ದೃಶ್ಯ ಈ ಸಂದರ್ಭದಲ್ಲಿ ಕಂಡುಬಂತು.
ಹರಾಜು ಪ್ರಕ್ರಿಯೆ ಇದೆ ಎನ್ನುವುದನ್ನು ಮನಗಂಡ ನೂರಾರು ಜನರು ಬೆಳಗಿನಿಂದಲೇ ಕಚೇರಿ ಮುಂದೆ ಜಮಾಯಿಸಿದ್ದರು. ಕಚೇರಿ ಆರಂಭವಾಗುತ್ತಿದ್ದಂತೆಯೇ ಠೇವಣಿ ಹಣ ಇಡಲು ಹಾಗೂ ಅರ್ಜಿಗಳನ್ನು ಪಡೆದುಕೊಳ್ಳಲು ನೂಕುನುಗ್ಗಲು ನಡೆಸಿದರೆನ್ನುವ ಮಾಹಿತಿ ಲಭ್ಯವಾಗಿದೆ.
ಕೋವಿಡ್ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಜನರು ಒತ್ತಟ್ಟಿಗೆ ಸೇರಿದ್ದರೂ, ಕ್ರಮಕ್ಕೆ ಮುಂದಾಗದ ಅಬಕಾರಿ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಅಸಮಧಾನ ಮೂಡಿಸಿದೆ.

