ರಾಯಚೂರು

ಗೆದ್ದು ಜನಸೇವೆ ಮಾಡಬೇಕೆಂದಿಲ್ಲಾ, ಸೇವಾ ಮನೋಭಾವವೇ ಅನುಭವ : ಲೆಕ್ಕಿಹಾಳ

ಲಿಂಗಸುಗೂರು : ರಾಜಕಾರಣ, ಜನಸೇವೆ ಮಾಡಲು ಚುನಾವಣೆಯಲ್ಲಿ ನಿಂತು ಗಲ್ಲಬೇಕೆನ್ನುವ ನಿಯಮವೇನಿಲ್ಲಾ. ಜನಸೇವೆ ಮಾಡುವ ಮನಸ್ಸಿದ್ದರೆ ಸಾಕು. ಅದೇ ಅನುಭವವನ್ನು ನೀಡುತ್ತದೆ ಎಂದು ಬಿಜೆಪಿ ತಾಲೂಕು ಅದ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.


ಸ್ಥಳೀಯ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರು ಹೇಳಿದಂತೆ ನಮಗೆ ಅನುಭವ ಕಡಿಮೆ ಇರಬಹುದು. ಆದರೆ, ನೀವು ಹೆಚ್ಚಿನ ಅನುಭವ ಇರುವ ಹಿರಿಯ ರಾಜಕಾರಣಿಗಳು. ನಿಮ್ಮ ಶಾಸಕರು ಅವಾಚ್ಯ ಶಬ್ದ ಪ್ರಯೋಗ ಮಾಡುವಾಗ ಅದನ್ನು ಖಂಡಿಸಬೇಕಿತ್ತು. ಪಟಾಲಯಂ ಅಂದರೆ ಬೆಂಬಲಿಗರು ಎನ್ನುವ ಅರ್ಥ ನೀಡುತ್ತದೆ. ಈ ಪದವನ್ನು ತಾವುಗಳು ಅವಚ್ಯ ಎನ್ನುವುದಾದರೆ ಮಾನ್ಯ ಶಾಸಕರು ಅವರ ಬಾಯಿಯಿಂದ ಆಡಿದ ಮಾತುಗಳ ಬಗ್ಗೆ ಏನು ಹೇಳುತ್ತೀರೆಂದು ಪ್ರಶ್ನಿಸಿದರು.


ಹಟ್ಟಿ ಚಿನ್ನದಗಣಿಯಲ್ಲಿ ಚಿಂಚರಕಿ ರಸ್ತೆಯನ್ನು ಈಗಿನ ಅಧ್ಯಕ್ಷರೇ ಅನುಮೋದನೆ ಕೊಡಿಸಿದ್ದಾರೆ. ಈ ಬಗ್ಗೆ ನಮ್ಮಲ್ಲಿ ಸಮರ್ಪಕವಾದ ದಾಖಲೆಗಳಿವೆ. ಯಾವುದೇ ಆಧಾರವಿಲ್ಲದೇ ಗಾಳಿಯಲ್ಲಿ ನಾವು ಮಾತಾಡುವುದಿಲ್ಲ. ಜನಸೇವೆ ಮಾಡುವ ಮನಸ್ಸುಳ್ಳವರು ಸೇವಮನೋಭಾವನೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ರಾಜಕಾರಣ ಮಾಡುತ್ತಾ ಅಭಿವೃದ್ಧಿಯ ಹೆಸರಿನಲ್ಲಿ ದೋಚುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಇನ್ನಾದರೂ ಮಾತಿನ ಮೇಲೆ ಹಿಡಿತ ಇಟ್ಟುಕೊಂಡು ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಿ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ಇದಕ್ಕೆಲ್ಲಾ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಲೆಕ್ಕಿಹಾಳ ಹೇಳಿದರು.


ಬಿಜೆಪಿ ಮುಖಂಡರಾದ ಗಿರಿಮಲ್ಲನಗೌಡ, ಡಾ.ಶಿವಬಸಪ್ಪ ಹೆಸರೂರು, ಶಂಕರಗೌಡ ಬಳಗಾನೂರು, ಹುಲ್ಲೇಶ ಸಾಹುಕಾರ ಸೇರಿ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!