ಗುರುಗುಂಟ : ಅಟೋ ಸ್ಟ್ಯಾಂಡ್ ಉದ್ಘಾಟನೆ
ಲಿಂಗಸುಗೂರು : ತಾಲೂಕಿನ ಗುರುಗುಂಟ ಗ್ರಾಮದಲ್ಲಿ ಅಟೋ ಚಾಲಕರ ಸ್ಟ್ಯಾಂಡ್ ಉದ್ಘಾಟನೆ ಮಾಡಲಾಯಿತು.
ಬಿ.ಎಂ.ಎಸ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೂಗೌಡ ಗುರಿಕಾರ, ಕನ್ನಡ ಸೇನೆ ಕರ್ನಾಟಕ ತಾಲೂಕು ಅದ್ಯಕ್ಷ ಶರಣೋಜಿ ಪವಾರ್ ಸ್ಟ್ಯಾಂಡ್‍ಗೆ ಚಾಲನೆ ನೀಡಿದರು. ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಮೂಲಕ ಗ್ರಾಹಕರೇ ದೇವರೆಂದು ತಿಳಿದು ಸಂಕಷ್ಟದ ಪರಿಸ್ಥಿತಿಯಲ್ಲೂ ಸಹನೆಯಿಂದ ಇರಬೇಕು ಎಂದು ಅಟೋ ಚಾಲಕರಿಗೆ ಕರೆ ನೀಡಲಾಯಿತು.
ಅಟೋ ಚಾಲಕರ ಸಂಘದ ಅದ್ಯಕ್ಷ ಹನುಮಂತ ಪವಾರ್, ಉಪಾದ್ಯಕ್ಷ ಶರಣಬಸವ ನಾಯಕ, ಪ್ರಧಾನ ಕಾರ್ಯದರ್ಶಿ ಅಮರೇಶ ಛತ್ರಪತಿ, ಖಜಾಂಚಿ ಅಮರೇಶ ಗಣೇಕಲ್, ಸಂಘಟನಾ ಕಾರ್ಯದರ್ಶಿ ಕಾಶಿನಾಥ, ಸಹ ಕಾರ್ಯದರ್ಶಿ ತುಳಜ ಮರಾಠಿ, ಸದಸ್ಯರಾದ ಗುಂಡಪಪ್ ಪವಾರ, ಶಿವಪ್ಪ ನಾಯಕ, ಗುಂಡಪ್ಪ ನಾಯಕ, ದಾದಾಪೀರ ಕಂಬಾರ ಸೇರಿ ಇತರರು ಇದ್ದರು.

