ಖರೀದಿ ಕೇಂದ್ರ ಆರಂಭಿಸಿ , ಬೆಂಬಲ ಬೆಲೆ ನಿಗದಿಗೆ ರೈತರ ಆಗ್ರಹ
ಲಿಂಗಸುಗೂರು : ತಾಲೂಕಿನಲ್ಲಿ ತೊಗರಿ ಖರೀದಿ ಕೇಂದ್ರ ಹಾಗೂ ಕಡಲೆ ಖರೀದಿ ಕೇಂದ್ರಗಳನ್ನು ಆರಂಭಿಸುವ ಜೊತೆಗೆ ತೊಗರಿಗೆ ಪ್ರತಿಕ್ವಿಂಟಲ್ 8 ಸಾವಿರ ರೂಪಾಯಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂದು ಕರ್ನಾಟಕ
ನೇಗಿಲಯೋಗಿರೈತ ಸಂಘದ ಕಾರ್ಯಕರ್ತರು ಆಗ್ರಹಿಸಿದರು.
ತಾಲೂಕಿನ ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಅಪರ
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಕಳೆದ ತಿಂಗಳು ಸಚಿವ ಉಮೇಶ ಕತ್ತಿಯವರು ತೊಗರಿಗೆ ಬೆಂಬಲವಾಗಿ 8 ಸಾವಿರ ರೂಪಾಯಿ ಬೆಲೆ ನೀಡುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ
ಯಾವುದೇ ಕ್ರಮ ಜರುಗಿಲ್ಲ. ಕೂಡಲೇ ಈ ವಿಷಯದ ಬಗ್ಗೆ ಸರಕಾರ ಗಮನ ಹರಿಸಿ ರೈತರಿಗೆ ನೆರವಾಗಬೇಕು. ತಾಲೂಕಿನ ನರಕಲದಿನ್ನಿ,ಪೈದೊಡ್ಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾಹಿತಿ ಹಕ್ಕಿನಲ್ಲಿ
ಮಾಹಿತಿ ನೀಡುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಾಲೂಕಿನ ಚಿಕ್ಕಹೆಸರೂರು, ಸರ್ಜಾಪೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಬವಣೆಯನ್ನು ನಿವಾರಿಸಬೇಕು ಸೇರಿ ಇತರೆ ಬೇಡಿಕೆಗಳ
ಈಡೇರಿಕೆಗೆ ಒತ್ತಾಯಿಸಿದರು.
ಸಂಘದ ಸಂಸ್ಥಾಪಕ ಅದ್ಯಕ್ಷ ಮಲ್ಲನಗೌಡ ಪಾಟೀಲ್, ತಾಲೂಕು ಅದ್ಯಕ್ಷ ಅಮರೇಶ ಸರಕಾರ, ಮುಖಂಡರಾದ ವಿರೇಶಪ್ಪ ಸೋಮಲಾಪೂರ, ರಡ್ಡೆಪ್ಪ ರಾಠೋಡ್, ಹನುಮಂತ ಚೌಹಾಣ್, ಬಸನಗೌಡ,ಮೌನೇಶ, ನಿಂಗಪ್ಪ, ಶರಣಬಸವ ಸೇರಿ ಇತರರು ಈ ಸಂದರ್ಭದಲ್ಲಿ ಇದ್ದರು.

